ಅಯೋಧ್ಯೆಯ ಆರು ಮಹಾದ್ವಾರಗಳಿಗೆ ರಾಮಾಯಣದ ಪಾತ್ರಗಳ ಹೆಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ : 

ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರವು
ಆರು ಮಹಾದ್ವಾರಗಳನ್ನು ಹೊಂದಿದ್ದು, ಎಲ್ಲದಕ್ಕೂ ರಾಮಾಯಣ ಪಾತ್ರಗಳ ಹೆಸರನ್ನು
ಇಡಲಾಗಿದೆ.

ತಮ್ಮ ಮಹತ್ವಾಕಾಂಕ್ಷೆಯ ಮತ್ತು ಕನಸಿನ ಯೋಜನೆಯಾಗಿ ಅಯೋಧ್ಯೆಯನ್ನು ವಿಶ್ವದರ್ಜೆಯ ನಗರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯ ಪೌರಾಣಿಕ ನೋಟವನ್ನು ಪುನಃಸ್ಥಾಪಿಸಲು ನಿರ್ಧರಿಸಿದ್ದಾರೆ.

ಲಕ್ನೋ, ಗೋರಖ್‌ಪುರ, ರಾಯ್‌ಬರೇಲಿ, ಗೊಂಡಾ, ಪ್ರಯಾಗ್‌ರಾಜ್, ವಾರಣಾಸಿಯಿಂದ ಬರುವ ಭಕ್ತರು ರಾಮಾಯಣ ಪಾತ್ರಗಳ ಹೆಸರಿನ ದೈತ್ಯ ಪ್ರವೇಶ ದ್ವಾರಗಳ ಮೂಲಕ ಅಯೋಧ್ಯೆಗೆ ಪ್ರವೇಶಿಸಬಹುದು.

ಲಕ್ನೋ ರಸ್ತೆಯಲ್ಲಿ ‘ಶ್ರೀರಾಮ್ ದ್ವಾರ’, ಗೋರಖ್‌ಪುರ ರಸ್ತೆಯಲ್ಲಿ ‘ಹನುಮಾನ್ ದ್ವಾರ’, ಅಲಹಾಬಾದ್ ರಸ್ತೆಯಲ್ಲಿ ‘ಭಾರತ್ ದ್ವಾರ’, ಗೊಂಡಾ ರಸ್ತೆಯಲ್ಲಿ ‘ಲಕ್ಷ್ಮಣ ದ್ವಾರ’, ವಾರಣಾಸಿ ರಸ್ತೆಯಲ್ಲಿ ‘ಜಟಾಯು ದ್ವಾರ’ ಮತ್ತು ರಾಯಬರೇಲಿ ರಸ್ತೆಯಲ್ಲಿ ‘ಗರುಡ ದ್ವಾರ’ ನಿಮ್ಮನ್ನು ಸ್ವಾಗತಿಸಲಿವೆ.

“ಪ್ರತಿ ಪ್ರವೇಶ ದ್ವಾರಗಳಲ್ಲಿ ದೊಡ್ಡ ಪಾರ್ಕಿಂಗ್ ಪ್ರದೇಶಗಳು, ಶೌಚಾಲಯಗಳು, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಸೇರಿದಂತೆ ಭಕ್ತರಿಗೆ ವಿಶ್ವದರ್ಜೆಯ ಸೌಲಭ್ಯಗಳು ಇರುತ್ತವೆ” ಎಂದು ಅಯೋಧ್ಯೆ ಜಿಲ್ಲಾಧಿಕಾರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!