ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಕಳೆದ ಮೂರು ವರ್ಷದಲ್ಲಿ ಆರು ಗ್ರೀನ್ ಫೀಲ್ಡ್ ಏರ್ ಪೋರ್ಟ್ ಗಳು ಕಾರ್ಯಾಚರಣೆ ಶುರುಮಾಡಿವೆ.
(ಗ್ರೀನ್ ಫೀಲ್ಡ್ ಲ್ಯಾಂಡ್ ಪ್ರಾಜೆಕ್ಟ್ ಎಂದರೆ ಪರಿಸರದ ಕಾಳಜಿಗಳನ್ನು ಗಮನದಲ್ಲಿಟ್ಟುಕೊಂಡು ಖಾಲಿ ಜಾಗದಲ್ಲಿ ಹೊಸದಾಗಿ ಮಾಡುವ ಯೋಜನೆ)
ದೇಶದಲ್ಲಿ ಈಗಾಗಲೇ ಕಾರ್ಯಾರಂಭಗೊಂಡಿರುವ ಆರು ಕಡೆಗಳಲ್ಲಿರುವ ಗ್ರೀನ್ ಫೀಲ್ಡ್ ಏರ್ ಪೋರ್ಟ್ ಗಳು- ಕೇರಳದ ಕಣ್ಣೂರು ವಿಮಾನ ನಿಲ್ದಾಣ (2018), ಸಿಕ್ಕಿಂನ ಪಾಕ್ಯೂಂಗ್ ವಿಮಾನ ನಿಲ್ದಾಣ (2018), ಕರ್ನಾಟಕದ ಕಲಬುರಗಿ ವಿಮಾನ ನಿಲ್ದಾಣ (2019), ಆಂಧ್ರಪ್ರದೇಶದ ಕರ್ನೂಲ್ ವಿಮಾನ ನಿಲ್ದಾಣ (2021), ಮಹಾರಾಷ್ಟ್ರದ ಸಿಂಧುದುರ್ಗ ವಿಮಾನ ನಿಲ್ದಾಣ (2021) ಹಾಗೂ ಉತ್ತರ ಪ್ರದೇಶದ ಕುಶಿನಗರ ವಿಮಾನ ನಿಲ್ದಾಣಗಳು ಸೇರಿವೆ.
ಇನ್ನು ಮಹಾರಾಷ್ಟ್ರದ ನವಿಮುಂಬೈ, ಗೋವಾದ ಮೋಪಾ, ರಾಜ್ ಕೋಟ್ ನ ಹಿರಾಸರ್, ಉತ್ತರಪ್ರದೇಶದ ಜೆವಾರ್ (ನೋಯ್ಡಾ) ಮತ್ತು ಅರುಣಾಚಲಪ್ರದೇಶದ ಹೊಲೊಂಗಿಯಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣದ ಕಾರ್ಯ ನಡೆಯುತ್ತಿದೆ.
ಇದಲ್ಲದೆ, ಕರ್ನಾಟಕದ ಬಿಜಾಪುರ, ಹಾಸನ, ಶಿವಮೊಗ್ಗ ವಿಮಾನ ನಿಲ್ದಾಣಗಳಿಗೆ, ಪುದುಚೆರಿಯ ಕಾರೈಕಲ್, ಗುಜರಾತ್ ನ ಧೋಲೇರಾ, ದಗದರ್ತಿ, ಆಂಧ್ರಪ್ರದೇಶದ ಭೋಗಾಪುರಂ ನಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ನಿವೃತ್ತ ನಾಗರಿಕ ವಿಮಾನಯಾನ ರಾಜ್ಯ ಸಚಿವ ಡಾ. ವಿ.ಕೆ. ಸಿಂಗ್ ಮಾಹಿತಿ ನೀಡಿದ್ದಾರೆ.
ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಗಳನ್ನು ಹೊರತುಪಡಿಸಿ ದೇಶದಲ್ಲಿ ವುಡಾನ್ ಯೋಜನೆ ಅಡಿಯಲ್ಲಿ ಹೆಚ್ಚುವರಿ 42 ವಿಮಾನ ನಿಲ್ದಾಣಗಳು ಕಾರ್ಯಗತಗೊಳಿಸಲಾಗಿದೆ.