ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಎರಡು ವಾರಗಳಲ್ಲಿ ನಿಗೂಢ ಪ್ರಾಣಿಯೊಂದು 6 ಮಂದಿಯನ್ನು ಹತ್ಯೆ ಮಾಡಿದೆ.
ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ ಅವರೆಲ್ಲರಿಗೂ ರೇಬಿಸ್ ಚುಚ್ಚುಮದ್ದನ್ನು ಚುಚ್ಚಲಾಯಿತು ಆದರೂ ಯಾರೂ ಬದುಕುಳಿಯಲಿಲ್ಲ. ಮೇ 5ರಂದು ಬೆಳಗಿನ ಜಾವ 1 ರಿಂದ 5 ಗಂಟೆ ನಡುವೆ ಈ ಘಟನೆ ನಡೆದಿದೆ.
ಆಗ ಗ್ರಾಮದ 17 ಮಂದಿ ಮಲಗಿದ್ದರು, ಜನರು ಮಲಗಿದ್ದಾಗ ಪ್ರಾಣಿ ದಾಳಿ ಮಾಡಿದೆ. ಪ್ರಾಣಿ ಯಾವುದೆಂದು ಗುರುತಿಸಲು ಸಾಧ್ಯವಾಗಲಿಲ್ಲ. ಲಿಂಬೈ ಗ್ರಾಮದ ಮೂರು ಸ್ಥಳಗಳಲ್ಲಿ ಆ ಪ್ರಾಣಿ ದಾಳಿ ನಡೆಸಿದೆ. ಒಬ್ಬರು ಅಂಗಳ ಗುಡಿಸುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿದೆ.ಬದುಕುಳಿದವರು ಆ ಪ್ರಾಣಿ ನಾಯಿಯಂತೆ ಕಾಣುತ್ತಿತ್ತು ಎಂದು ಹೇಳಿದ್ದಾರೆ.
ಬೊಗಳಲಿಲ್ಲ, ಗುರುಗುಟ್ಟಲೂ ಇಲ್ಲ ನೆರಳಿನಂತೆ ಬಂದು ಕಚ್ಚಿ ಕಣ್ಮರೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಎಲ್ಲಾ 17 ಮಂದಿಗೆ ಬರ್ವಾನಿ ಮತ್ತು ಇಂದೋರ್‌ನ ವೈದ್ಯಕೀಯ ಕೇಂದ್ರಗಳಲ್ಲಿ ರೇಬೀಸ್ ವಿರೋಧಿ ಲಸಿಕೆ ನೀಡಲಾಯಿತು. ಆದರೆ ಮೇ 23 ಮತ್ತು ಜೂನ್ 2 ರ ನಡುವೆ, ಅವರಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ . ಅವರಲ್ಲಿ ಇಬ್ಬರು ಮಹಿಳೆಯರು ಮತ್ತು 40 ರಿಂದ 60 ವರ್ಷ ವಯಸ್ಸಿನ ನಾಲ್ವರು ಪುರುಷರು.