Friday, August 19, 2022

Latest Posts

ನ್ಯೂಜಿಲೆಂಡ್ ಸೂಪರ್ ಮಾರ್ಕೆಟ್ ನಲ್ಲಿ ಉಗ್ರ ದಾಳಿ: ಆರು ಜನರಿಗೆ ಚಾಕು ಇರಿತ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ನ್ಯೂಜಿಲೆಂಡ್ ಸೂಪರ್ ಮಾರ್ಕೆಟ್ ನಲ್ಲಿ ಉಗ್ರ ದಾಳಿ ಸಂಭವಿಸಿದ್ದು, ಮಾರ್ಕೆಟ್ ಪ್ರವೇಶಿಸಿದ ಶಂಕಿತ ಉಗ್ರ ಚಾಕುವಿನಿಂದ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದ್ದು, ಈ ವೇಳೆ ಆರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಗುಂಪಿನಿಂದ ಸ್ಫೂರ್ತಿ ಪಡೆದ ದಾಳಿಕೋರ ಶುಕ್ರವಾರ, ನ್ಯೂಜಿಲೆಂಡ್‌ನ ಸೂಪರ್‌ ಮಾರ್ಕೆಟ್‌ನಲ್ಲಿ ಆರು ಜನರನ್ನು ಇರಿದಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಭದ್ರತಾ ಪಡೆಗಳು ಆತನನ್ನು ಹೊಡೆದುರುಳಿಸಿವೆ.
ಇನ್ನು ಈ ಬಗ್ಗೆ ಸ್ವತಃ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಮಾಹಿತಿ ನೀಡಿದ್ದು, ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯಿಂದ ಸ್ಫೂರ್ತಿ ಪಡೆದಿದ್ದ ಶಂಕಿತ ಉಗ್ರ ಈ ದಾಳಿ ಮಾಡಿದ್ದು, ಆತನನ್ನು ಈ ಮೊದಲೇ ಉಗ್ರ ಚಟುವಟಿಕೆ ಶಂಕೆ ಮೇರೆಗೆ ಭದ್ರತಾ ಪಡೆಗಳ ಕಣ್ಗಾವಲಿನಲ್ಲಿನಲ್ಲಿರಿಸಲಾಗಿತ್ತು ಎಂದು ಹೇಳಿದ್ದಾರೆ.
2011 ರಲ್ಲಿ ನ್ಯೂಜಿಲ್ಯಾಂಡ್‌ಗೆ ಆಗಮಿಸಿದ್ದ ಮತ್ತು ಭಯೋತ್ಪಾದನೆ ವೀಕ್ಷಣಾ ಪಟ್ಟಿಯಲ್ಲಿದ್ದ ಶ್ರೀಲಂಕಾ ಪ್ರಜೆ ನ್ಯೂಜಿಲೆಂಡ್ ನ ಆಕ್ಲೆಂಡ್‌ನ ಉಪನಗರದಲ್ಲಿರುವ ಶಾಪಿಂಗ್ ಮಾಲ್‌ಗೆ ಪ್ರವೇಶಿಸಿ, ಅಲ್ಲಿದ್ದ ಚಾಕುವನ್ನು ಕಸಿದು ಅಲ್ಲಿದ್ದ ವ್ಯಾಪಾರಿಗಳ ಮೇಲೆ ದಾಳಿ ಮಾಡಿದ್ದಾನೆ. ದಾಳಿ ಆರಂಭವಾದ 60 ಸೆಕೆಂಡುಗಳಲ್ಲಿ ಆತನ ಮೇಲೆ ನಿಗಾ ಇಟ್ಟಿದ್ದ ಪೋಲಿಸರು ಗುಂಡು ಹಾರಿಸಿ ಆತನನ್ನು ಕೊಂದು ಹಾಕಿದ್ದಾರೆ. ಘಟನೆಯಲ್ಲಿ ಆರು ಜನರು ಗಾಯಗೊಂಡಿದ್ದು, ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದರು.
‘ಇಂದು ನಡೆದದ್ದು ಹೇಯ, ದ್ವೇಷ, ತಪ್ಪು,. ಈತ ಯಾವುದೇ ನಂಬಿಕೆ ಅಥವಾ ಸಮುದಾಯದ ಪ್ರತಿನಿಧಿಯಲ್ಲ. ಇದು ಹಿಂಸಾತ್ಮಕ ಸಿದ್ಧಾಂತ ಮತ್ತು ಐಸಿಸ್- ಪ್ರೇರಿತ ದಾಳಿ. 2016 ರಿಂದ ಕಣ್ಗಾವಲಿನಲ್ಲಿರುವ ವ್ಯಕ್ತಿಯ ಬಗ್ಗೆ ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ, ಆತ ನ್ಯಾಯಾಲಯ ನಿಗ್ರಹದ ಆದೇಶಗಳ ವಿಷಯವಾಗಿರುತ್ತಾನೆ. ಪೊಲೀಸ್ ಕಮೀಷನರ್ ಆಂಡ್ರ್ಯೂ ಕೋಸ್ಟರ್ ಅವರು ಉತ್ತಮ ನಿರ್ವಹಣೆ ಮಾಡಿದ್ದು ಮತ್ತು ಸಮುದಾಯಕ್ಕೆ ಯಾವುದೇ ಅಪಾಯವಿಲ್ಲ ಎಂದು ಜಸ್ಸಿಂಡಾ ವಿಶ್ವಾಸ ವ್ಯಕ್ತಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!