ದುಬಾರೆ ಅರಣ್ಯದಲ್ಲಿ ಕಳ್ಳಬೇಟೆಗೆ ಸ್ಕೆಚ್; ಮೂವರ ಬಂಧನ, ಇಬ್ಬರಿಗಾಗಿ ತೀವ್ರ ಶೋಧ

ಹೊಸದಿಗಂತ ವರದಿ ಮಡಿಕೇರಿ: ಮಾಲ್ದಾರೆ ಸಮೀಪದ ದುಬಾರೆ ಮೀಸಲು ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಳ್ಳಬೇಟೆಗೆ ಸಿದ್ಧತೆ ನಡೆಸಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಮೂವರನ್ನು ವಶಕ್ಕೆ ಪಡೆದಿದ್ದು, ಈ ವೇಳೆ ಇಬ್ಬರು ಆರೋಪಿಗಳು ಬಂದೂಕಿನೊಂದಿಗೆ ಅರಣ್ಯದೊಳಗೆ ಪರಾರಿಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ವಶಕ್ಕೆ ಪಡೆದವರನ್ನು ಕೇರಳದ ತ್ರಿಶೂರ್ ಜಿಲ್ಲೆಯ ಥೋಮಸ್, ಸುರೇಶ್ ಹಾಗೂ ಕೊಡಗಿನ ಕೊಂಡಗೇರಿ ಗ್ರಾಮದ ಮೊಹಮ್ಮದ್ ಹನೀಫ್ ಎಂದು ಗುರುತಿಸಲಾಗಿದೆ. ಕೊಂಡಂಗೇರಿಯ ನೌಷದ್.ಎ.ಎಂ, ಕೇರಳದ ಕಣ್ಣೂರಿನ ಅಶ್ರಫ್ ಪರಾರಿಯಾಗಿರುವುದಾಗಿ ಹೇಳಲಾಗಿದೆ. … Continue reading ದುಬಾರೆ ಅರಣ್ಯದಲ್ಲಿ ಕಳ್ಳಬೇಟೆಗೆ ಸ್ಕೆಚ್; ಮೂವರ ಬಂಧನ, ಇಬ್ಬರಿಗಾಗಿ ತೀವ್ರ ಶೋಧ