ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಸಂಚಾರ ಪೊಲೀಸರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಕರೆ ಬಂದಿದೆ. ಫೋನ್ ಕರೆ ಮಾತ್ರವಲ್ಲದೆ ಮುಂಬೈ ಟ್ರಾಫಿಕ್ ಪೊಲೀಸರಿಗೆ ಈ ರೀತಿಯ ಬೆದರಿಕೆ ಮೆಸೇಜ್ ಕೂಡ ಕಳಿಸಲಾಗಿದೆ.
ಈ ಬಗ್ಗೆ ಮುಂಬೈನ ವರ್ಲಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಾಗಿದೆ. ಪೊಲೀಸರು ಬೆದರಿಕೆ ಕರೆ ಹಾಗೂ ಸಂದೇಶ ಕಳಿಸಿದವರನ್ನು ಪತ್ತೆ ಮಾಡಲು ಕಾರ್ಯನಿರತರಾಗಿದ್ದಾರೆ.
ಪೊಲೀಸ್ ತಂಡವು ಅಲರ್ಟ್ ಮೋಡ್ನಲ್ಲಿದ್ದು, ಬೆದರಿಕೆ ಹಾಕಿದ ವ್ಯಕ್ತಿಗಾಗಿ ಶೋಧ ನಡೆಸುತ್ತಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಕರೆ ಬರುತ್ತಿದ್ದಂತೆ, ಮಾಹಿತಿಯನ್ನು ಮುಂಬೈನ ವರ್ಲಿ ಪೊಲೀಸ್ ಠಾಣೆಗೆ ರವಾನಿಸಲಾಯ್ತು. ಬಳಿಕ ವರ್ಲಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತನಿಖೆಗೆ ಸೈಬರ್ ಸೆಲ್ನ ಸಹಾಯವನ್ನೂ ಪಡೆಯಲಾಗಿದೆ. ಕ್ರೈಂ ಬ್ರಾಂಚ್ ಕೂಡ ಆರೋಪಿಗಳ ಪತ್ತೆಗೆ ಶ್ರಮಿಸುತ್ತಿದೆ.