Wednesday, July 6, 2022

Latest Posts

ನಾಯಕ ಧವನ್ ತಾಳ್ಮೆಯ ಆಟ: ಶ್ರೀಲಂಕಾಗೆ 133 ರನ್​ಗಳ ಟಾರ್ಗೆಟ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಭಾರತ ಮತ್ತು ಶ್ರೀಲಂಕಾ ನಡುವಿನ 2ನೇ ಟಿ 20 ಪಂದ್ಯದಲ್ಲಿ ಭಾರತವು ಶ್ರೀಲಂಕಾಗೆ 133 ರನ್​ಗಳ ಸಾಧಾರಣ ಮೊತ್ತ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಮ್ ಇಂಡಿಯಾ ಪರ ನಾಯಕ ಧವನ್ 40 ರನ್​ಗಳ ಅತ್ಯಧಿಕ ರನ್ ಕೊಡುಗೆ ನೀಡಿದರು. ಉಳಿದಂತೆ ಇತರೆ ಆಟಗಾರರು ನಿರೀಕ್ಷಿಸಿದಷ್ಟು ಆಟವಾಡಲಿಲ್ಲ.
ಆರಂಭಿಕ ಆಟಗಾರ ಋತುರಾಜ್ ಗಾಯ್ಕವಾಡ 21 ರನ್ ಗಳಿಸಿ ಔಟಾದರೆ, ಚೊಚ್ಚಲ ಪಂದ್ಯವಾಡುತ್ತಿರುವ ದೇವದತ್ ಪಡಿಕ್ಕಲ್​ 29 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸಂಜು ಸ್ಯಾಮ್ಸನ್ ಕೇವಲ 7 ರನ್ ಗಳಿಸಿದರೆ, ನಿತೀಶ್ ರಾಣಾ 9 ಕ್ಕೆ ಔಟಾದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್ ಗಳಲ್ಲಿ ಕೇವಲ 132 ರನ್ ಗಳಿಸಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss