ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಕೋಡಾ ಕಂಪನಿಯ ಹೊಸ ಕಾರಿಗೆ ಸಂಸ್ಕೃತದ ಹೆಸರೊಂದನ್ನು ಕಾಸರಗೋಡಿನ ಶಿಕ್ಷಕರೊಬ್ಬರು ಸೂಚಿಸಿದ್ದಾರೆ. ಆ ಹೆಸರು ಕಂಪನಿಗೂ ಇಷ್ಟ ಆಗಿದ್ದು, ಶಿಕ್ಷಕರಿಗೆ ಒಂದು ಹೊಸ ಕಾರನ್ನು ಕೊಡುಗೆಯಾಗಿ ನೀಡಿದೆ.
ʼನೇಮ್ ಯುವರ್ ಸ್ಕೋಡಾ’ ಅಭಿಯಾನದ ಮೂಲಕ ಹೊಸ ಕಾರಿಗೆ ಹೆಸರು ನೀಡಲು ಕಂಪನಿ ಪ್ರಕಟಣೆ ನೀಡಿತ್ತು. ದೇಶಾದ್ಯಂತ ಸಾಕಷ್ಟು ಕಾರು ಪ್ರಿಯರು ಹೆಸರನ್ನು ಸೂಚಿಸಿ ಅಭಿಯಾನದಲ್ಲಿ ಭಾಗವಹಿಸಿದ್ದರು. ಇಂಗ್ಲಿಷ್ ವರ್ಣಮಾಲೆಯಲ್ಲಿ K ಯಿಂದ ಪ್ರಾರಂಭವಾಗುವ ಮತ್ತು Q ನೊಂದಿಗೆ ಕೊನೆಗೊಳ್ಳುವ ಹೆಸರನ್ನು ಸೂಚಿಸಲು ಕಂಪನಿ ಕೇಳಿತ್ತು. ಐದು ಹೆಸರು ಸೂಚಿಸುವ ಆಯ್ಕೆಯನ್ನು ನೀಡಿತ್ತು. ಕಾಸರಗೋಡು ಮೂಲದ ಮೊಹಮ್ಮದ್ ಜಿಯಾದ್ ಎಂಬವರು ಎಸ್‌ಯುವಿಗೆ ʼಕೈಲಾಕ್’ ಎಂಬ ಹೆಸರನ್ನು ಸೂಚಿಸಿದ್ದರು. ಇದನ್ನು ಕಂಪನಿ ಆಯ್ಕೆ ಮಾಡಿಕೊಂಡಿದೆ.
24 ವರ್ಷ ವಯಸ್ಸಿನ ಜಿಯಾದ್ ಅವರು ಕಾಸರಗೋಡಿನ ನಜಾತ್ ಕುರಾನ್ ಅಕಾಡೆಮಿಯಲ್ಲಿ ಶಿಕ್ಷಕರಾಗಿದ್ದಾರೆ. ಹೆಸರನ್ನು ಸೂಚಿಸಿದ ನಂತರ, ಸ್ಪರ್ಧೆಯ ಅಪ್‌ಡೇಟ್‌ಗಳಿಗಾಗಿ ಸ್ಕೋಡಾದ ಇನ್ಸ್ಟಾ ಖಾತೆಯನ್ನು ಜಿಯಾದ್ ಫಾಲೋ ಮಾಡಿದ್ದರು. ಎರಡು ಲಕ್ಷ ಹೆಸರುಗಳನ್ನು ಜಿಯಾದ್ ಸೂಚಿಸಿದ ಹೆಸರು ಶಾರ್ಟ್‌ಲಿಸ್ಟ್ ಆಗಿದೆ. ನಂತರ ಬಹುಮಾನ ಅನೌನ್ಸ್ ಆಗಿದ್ದು, ನಂಬೋಕೆ ಆಗ್ತಿಲ್ಲ ಎಂದು ಸ್ಪರ್ಧಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕಾರು ತಯಾರಕ ಕಂಪನಿ ಸ್ಕೋಡಾ ಪ್ರಕಾರ, ಕೈಲಾಕ್ ಎಂಬುದು ಸಂಸ್ಕೃತ ಪದ ಹಾಗೂ ʼಸ್ಫಟಿಕʼ ಎಂಬುದು ಅದರ ಅರ್ಥ. ಸ್ಕೋಡಾ ಕಂಪನಿಯು ಕ್ವಿಕ್, ಕಾಸ್ಮಿಕ್, ಕ್ಲಿಕ್ ಮತ್ತು ಕಯಾಕ್ ಹೆಸರುಗಳನ್ನು ಹೊಂದಿತ್ತು. ಅವುಗಳನ್ನು ಬದಲಿಸಿ ಹೊಸ ಮಾದರಿಗೆ ಕೈಲಾಕ್ ಎಂದು ಹೆಸರನ್ನು ನೀಡಿದೆ.