ವಿರೋಧದ ನಡುವೆಯೂ ವಯನಾಡ್ ಜಿಲ್ಲೆಯಲ್ಲಿ ಹಂದಿ ಸಂಹಾರ ಶುರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ಕೇರಳದ ವಯನಾಡ್ ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆ ಭಾಗದ ಹಂದಿಗಳ ಸಂಹಾರ ಕಾರ್ಯ ಆರಂಭಗೊಂಡಿದೆ.

ಸ್ಥಳೀಯ ಆಡಳಿತ ನೀಡಿರುವ ಆದೇಶದಂತೆ ರೋಗ ಕಾಣಿಸಿಕೊಂಡಿರುವ ಮಾನಂತವಾಡಿಯಲ್ಲಿ ಹಂದಿಗಳನ್ನು ಕೊಲ್ಲುವ ಕಾರ್ಯ ನಡೆಸಲಾಗಿದೆ. ಈ ನಡುವೆ ಸ್ಥಳೀಯ ಹಂದಿ ಸಾಕಣೆಗಾರರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ವಿರೋಧದ ನಡುವೆಯೂ ಅಧಿಕಾರಿಗಳು ಅವರ ಮನವೊಲಿಸಿ ಸೋಂಕಿತ ಹಂದಿಗಳನ್ನು ಕೊಲ್ಲುವ ಕಾರ್ಯ ಮುಂದುವರಿಸಿದ್ದಾರೆ.

ಹಂದಿ ಸಾಕಣೆದಾರರಿಗೆ ಸೂಕ್ತ ಪರಿಹಾರ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗುವುದು ಎಂದು ಕಾರ್ಯಾಚರಣೆ ಸಂಯೋಜಕರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!