BIG SHOCKING || ಸ್ಲೀಪರ್ ಸೆಲ್ ಆಕ್ಟೀವ್, ಪ್ರಧಾನಿ ಮೋದಿ ಹತ್ಯೆಗೆ ಸ್ಕೆಚ್!?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಹತ್ಯೆ ನಡೆಸುವುದಾಗಿ ರಾಷ್ಟ್ರೀಯ ತನಿಖಾ ದಳಕ್ಕೆ ಅನಾಮಿಕ ಇ ಮೇಲ್ ರವಾನೆಯಾಗಿದೆ.
ಕೃತ್ಯಕ್ಕೆ ಸ್ಕೆಚ್ ಹಾಕಿದ ಭಯೋತ್ಪಾದಕರ ಬಳಿ ಬರೋಬ್ಬರಿ 20 ಕೆ.ಜಿ. ಗಳಷ್ಟು ಆರ್‌ಡಿಎಕ್ಸ್ ಇದೆ. ದೇಶದ 20 ಸ್ಥಳಗಳಲ್ಲಿ ಸ್ಲೀಪರ್ ಸೆಲ್‌ಗಳು ಜಾಗೃತವಾಗಿದೆ. ಸೂಕ್ತ ಸಮಯಕ್ಕಾಗಿ ಕಾಯಲಾಗುತ್ತಿದೆ ಎಂಬ ಮಾಹಿತಿಯನ್ನು ಆಗಂತುಕ ಇ ಮೇಲ್‌ನಲ್ಲಿ ಹೇಳಿಕೊಂಡಿದ್ದಾನೆ. ಜೊತೆಗೆ ತನಗೆ ಭಯೋತ್ಪಾದಕರೊಂದಿಗೆ ಸಂಪರ್ಕ ಇದೆ. ಈ ಸಂಚಿನ ಪೂರ್ಣ ವಿವರ ಬಹಿರಂಗವಾಗಬಾರದು ಎಂಬ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದೂ ಆತ ಬರೆದುಕೊಂಡಿದ್ದಾನೆ.
ರಾಷ್ಟ್ರೀಯ ತನಿಖಾ ದಳದ ಮುಂಬಯಿ ಬ್ರಾಂಚ್ ಈ  ಮೇಲ್ ಸ್ವೀಕರಿಸಿದ್ದು, ಭದ್ರತಾ ಏಜೆನ್ಸಿಗಳಿಗೆ ಇದನ್ನು ರವಾನಿಸಿ ಎಚ್ಚರಿಸಿದೆ. ಸೈಬರ್ ಭದ್ರತಾ ಏಜೆನ್ಸಿ ಕೂಡಾ ಈಗ ಸಕ್ರೀಯವಾಗಿದ್ದು, ಸಂದೇಶ ಬಂದ ಐಪಿ ವಿಳಾಸ ಸಹಿತ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!