Tuesday, August 16, 2022

Latest Posts

ಎಡ ಪಕ್ಕಕ್ಕೆ ತಿರುಗಿ, ನೇರವಾಗಿ ಕಾಲು ನೀಡಿ ಮಲಗುವುದರಿಂದ ಏನೆಲ್ಲಾ ಲಾಭವಿದೆ ಗೊತ್ತಾ? ಇಲ್ಲಿದೆ ನೋಡಿ…

ಮಲಗುವ ಭಂಗಿ ಒಬ್ಬೊಬ್ಬರದ್ದು ಒಂದೊಂದು ರೀತಿ ಇರುತ್ತದೆ. ನಾವು ಮಲಗುವ ಭಂಗಿಯಲ್ಲಿಯೇ ಆರೋಗ್ಯವಿದೆ.ಸಾಧಾರಣವಾಗಿ ನಾವು ಮಲಗಿಕೊಂಡಾಗ ಇಡೀ ರಾತ್ರಿ ಒಂದೇ ರೀತಿ ಮಲಗಿರುತ್ತೇವೆ ಎಂದು ಹೇಳಲು ಬರುವುದಿಲ್ಲ. ನಿದ್ರೆ ಮಧ್ಯದಲ್ಲಿ ಆಗಾಗ ಅತ್ತಿತ್ತ ಹೊರಳಾಡುತ್ತಿರುತ್ತೇವೆ. ಎಡ ಬದಿಗೆ ತಿರುಗಿ ಮಲಗುವ ಅಭ್ಯಾಸ ಸಾಕಷ್ಟು ಒಳ್ಳೆಯ ಆರೋಗ್ಯ ಲಾಭಗಳನ್ನು ತಂದು ಕೊಡುತ್ತದೆ.

ಜೀರ್ಣ:
ಎಡ ಬದಿಗೆ ಮಗ್ಗಿಲಾಗಿ ಮಲಗಿದರೆ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತದೆ.

ಬೆನ್ನು ನೋವು:
ಬೆನ್ನು ನೋವು, ಬೆನ್ನು ಹುರಿ ಸಮಸ್ಯೆಯನ್ನು ಹೊಂದಿರುವವರು ಈ ಭಂಗಿಯಲ್ಲಿ ಮಲಗಿದರೆ ಉತ್ತಮ ಪರಿಣಾಮ ಬೀರುತ್ತದೆ.

ಕುತ್ತಿಗೆ ನೋವು:
ಈ ಭಂಗಿಯಲ್ಲಿ ದಿನವೂ ಮಲಗಿದರೆ ಕುತ್ತಿಗೆ ನೋವು ಬರುವುದಿಲ್ಲ. ನೇರವಾಗಿ ಮಲಗಿದರೆ ಕುತ್ತಿಗೆ ಉಳುಕುವ ಸಾಧ್ಯತೆ ಇರುತ್ತದೆ.

ಗರ್ಭಿಣಿ:
ಗರ್ಭಿಣಿ ಮಹಿಳೆಯರು ನೇರವಾಗಿ ಮಲಗಿದರೆ ಮಗುವಿಗೆ ಉಸಿರಾಡುವುದು ಕಷ್ಟವಾಗುತ್ತದೆ. ಅದೇ ಈ ಎಡ ಮಗ್ಗಿಲಲ್ಲಿ  ಮಲಗಿದರೆ ಯಾವುದೇ ತೊಂದರೆ ಇರುವುದರಿಲ್ಲ. ಈ ಭಂಗಿಯ ಆರೋಗ್ಯ ಪ್ರಯೋಜನಗಳನ್ನು ಅರಿತು ವೈದ್ಯರು ಗರ್ಭಿಣಿ ಮಹಿಳೆಯರಿಗೆ ಇದೇ ರೀತಿ ಮಲಗಲು ಹೇಳುತ್ತಾರೆ.

ಗೊರಕೆ:
ಗೊರಕೆ ಹೊಡೆಯುವ ಸಮಸ್ಯೆ ಇರುವವರು ಈ ಭಂಗಿಯಲ್ಲಿ ಮಲಗಿದರೆ ಗೊರಕೆ ಹೊಡೆಯುವುದು ನಿಯಂತ್ರಣಕ್ಕೆ ಬರುತ್ತದೆ.

ವಿಷಕಾರಿ ತ್ಯಾಜ್ಯ:
ಈ ಭಂಗಿಯಲ್ಲಿ ಮಲಗಿದರೆ ಮೆದುಳಿನ ಭಾಗದಲ್ಲಿರುವ ವಿಷಕಾರಿ ತ್ಯಾಜ್ಯವನ್ನು ನಿಮ್ಮ ದೇಹ ಹೊರ ಹಾಕಲು ಸಹಾಯವಾಗುತ್ತದೆ. ಇದರಿಂದ ಅಲ್ಜಿಮರ್ ಮತ್ತು ಡೆಮೆನ್ಷಿಯ ಕಾಯಿಲೆ ಬರದಂತೆ ತಡೆಯಬಹುದು.

ನಿರಂತರ ನಿದ್ದೆ:
ರಾತ್ರಿ ಮಲಗಿರುವ ಸಮಯದಲ್ಲಿ ಆಗಾಗ ಎಚ್ಚರಗೊಳ್ಳುವುದು ತಪ್ಪುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss