Tuesday, July 5, 2022

Latest Posts

ಈ ಕಾರಿನ ಕಾರ್ಖಾನೆಯಲ್ಲಿ ರೊಬೋಗಳೇ ಎಲ್ಲ, ಮಾನವ ಕಾರ್ಮಿಕರೇ ಇಲ್ಲ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಖ್ಯಾತ ನಿಸ್ಸಾನ್ ಮೋಟಾರ್ ಕಂಪನಿಯ ಅತ್ಯಧ್ಬುತ ಕಾರ್ಖಾನೆ ‘ಟೊಚಿಗಿ’ ಬಗ್ಗೆ ಕೇಳಿದ್ದೀರಾ? ಇದು ಜಪಾನ್ ನ ಟೋಕಿಯೋ ದಲ್ಲಿದೆ.

ಟೊಚಿಗಿ ಕಾರ್ಖಾನೆಯ ವಿಶೇಷತೆ ಏನೆಂದರೆ ಇಲ್ಲಿ ಯಾವ ಮಾನವ ಕೈಗಳು ಕೆಲಸ ಮಾಡುವುದಿಲ್ಲ. ಇಲ್ಲಿ ರೋಬೋಟ್‌ಗಳೇ ಕಾರ್ಮಿಕರು. ವೈಲ್ಡಿಂಗ್ ನಿಂದ ಹಿಡಿದು ವಾಹನಗಳ ಬಿಡಿ ಭಾಗಗಳಿಗೆ ಬಣ್ಣ ಹಚ್ಚುವಲ್ಲಿಯವರೆಗೂ ರೋಬೋಟ್ ಗಳದ್ದೇ ಉಸ್ತುವಾರಿ.

ಎಲೆಕ್ಟ್ರಿಕ್ ಮೋಟಾರ್, ಇ- ಪವರ್ ಮತ್ತು ಸಾಮಾನ್ಯ ಎಂಜಿನ್ ಚಾಲಿತ ಮೋಟಾರ್  ಮಾದರಿಯಲ್ಲಿ ಟೊಚಿಗಿ ಕಾರ್ಖಾನೆ ವಾಹನಗಳನ್ನು ವಿನ್ಯಾಸಗೊಳಿಸುತ್ತದೆ. ಈ ಎಲ್ಲಾ ಮಾದರಿಗಳು ಒಂದೇ ರೀತಿಯ ಪವರ್ ಟ್ರೇನ್ ಹೊಂದಿದ್ದು, ಒಂದೇ ರೀತಿಯಲ್ಲಿ ಬಿಲ್ಡ್ ಮಾಡಬಹುದಾಗಿದೆ.

ರೋಬೋಟ್‌ಗಳು ಈ ಕಾರ್ಯವನ್ನು ಸುಲಲಿತವಾಗಿ ನಿರ್ವಹಿಸುತ್ತಿದ್ದು, ಮಾನವ ಕೆಲಸಗಾರರು ಈ ಬಗ್ಗೆ ಹೆಚ್ಚು ಗಮನ ಹರಿಸುವ ಅವಶ್ಯಕತೆ ಇಲ್ಲ. ಇದರಿಂದಾಗಿ ಮಾನವ ಕಾರ್ಮಿಕರು ರೋಬೋಟ್‌ಗಳಿಂದ ಸಂಗ್ರಹಿಸಿದ ಡೇಟಾವನ್ನು ವಿಶ್ಲೇಷಿಸುವ ಅಥವಾ ಕಾರ್ಖಾನೆಯ ಉಪಕರಣಗಳನ್ನು ನಿರ್ವಹಿಸುವಂತಹ ಕೆಲಸದ ಮೇಲೆ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತದೆ.

“ಕೃತಕ ಬುದ್ಧಿಮತ್ತೆಯನ್ನು ಹೊಂದಿರುವ ರೋಬೋಟ್‌ಗಳಿಂದ ಇಂದು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಬಹುದಾಗಿದೆ. ತಂತ್ರಜ್ಞಾನವು ಆ ಮಟ್ಟಕ್ಕೆ ಅಭಿವೃದ್ಧಿಗೊಂಡಿದೆ” ಎಂದು  ನಿಸ್ಸಾನ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹಿಡೆಯುಕಿ ಸಕಮೊಟೊ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss