ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೋವಿಡ್ -19 ಲಸಿಕೆ ನೀತಿಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆಗಳಿಗೆ, ವಿಶೇಷವಾಗಿ ಆನ್ಲೈನ್ ನೋಂದಣಿಗೆ ಸಂಬಂಧಿಸಿದ ಟೀಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ವ್ಯಾಕ್ಸಿನೇಷನ್ ಕೇಂದ್ರಕ್ಕೆ ಕಾಲಿಡುವ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ನೀಡಬೇಕು. ಇಂಟರ್ನೆಟ್ ಬಳಕೆಯ ಸೌಲಭ್ಯ ಇಲ್ಲದ ಜನರಿಗೂ ಜೀವಿಸುವ ಹಕ್ಕಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಈ ಟ್ವೀಟ್ಗೆ ತಿರುಗೇಟು ನೀಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ‘ನೀವು ಅಕೇಶಿಯ ಮರಕ್ಕೆ ಬೀಜಗಳನ್ನು ಬಿತ್ತಿದ್ದೀರಿ, ಅದರಿಂದ ಮಾವಿನಹಣ್ಣನ್ನು ನಿರೀಕ್ಷಿಸಬೇಡಿ ಎಂದು ಕಬೀರದಾಸರು ಹೇಳಿದ್ದಾರೆ. ಅರ್ಥಮಾಡಿಕೊಳ್ಳುವವರಿಗೆ ಅರ್ಥವಾಗುತ್ತದೆ’ ಎಂದು ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ.
‘ವಾಕ್-ಇನ್ ನೋಂದಣಿಗೆ ಕೇಂದ್ರ ಸರ್ಕಾರ ಈಗಾಗಲೇ ರಾಜ್ಯಗಳಿಗೆ ಅನುಮೋದನೆ ನೀಡಿದೆ. ಗೊಂದಲವನ್ನು ಹರಡಬೇಡಿ, ಅದನ್ನು ಸರಿಪಡಿಸಿ’ ಎಂದು ಕೂಡಾ ಮನವಿ ಮಾಡಿದ್ದಾರೆ. ರೆ.
‘ಇಂಟರ್ನೆಟ್ ಅಥವಾ ಸ್ಮಾರ್ಟ್ ಫೋನ್ಗಳ ಸೌಲಭ್ಯವಿಲ್ಲದ 18-44 ವಯಸ್ಸಿನ ಜನರು ಕೋವಿನ್ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ನೋಂದಾಯಿಸಲು ಇಂಟರ್ನೆಟ್ ಇಲ್ಲದೆಯೇ ವಾಕ್-ಇನ್ ಸಹಾಯ ಪಡೆಯಬಹುದು ಎಂದು ಕೇಂದ್ರವು ಕಳೆದ ತಿಂಗಳು ಅಧಿಸೂಚನೆ ಹೊರಡಿಸಿತ್ತು.