ಐಸಿಸಿ ಅತ್ಯುತ್ತಮ ಮಹಿಳಾ ಕ್ರಿಕೆಟರ್‌ ಆಗಿ ಭಾರತದ ಸ್ಮೃತಿ ಮಂದಾನ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಐಸಿಸಿ ವಾರ್ಷಿಕ ಅತ್ಯುತ್ತಮ ಮಹಿಳಾ ಕ್ರಿಕೆಟರ್‌ ಆಗಿ ಭಾರತದ ಸ್ಮೃತಿ ಮಂದಾನ ಆಯ್ಕೆಯಾಗಿದ್ದಾರೆ.
ಸ್ಮೃತಿ ಮಂದಾನ ಅವರು 2021ರಲ್ಲಿ ಒಟ್ಟು 22 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿ 38.86 ಸರಾಸರಿಯಲ್ಲಿ 855 ರನ್‌ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಮೃತಿ ಅವರ ಅದ್ಭುತ ಪ್ರದರ್ಶನಕ್ಕೆ ಐಸಿಸಿ ರಾಚೆಲ್‌ ಹೇಹೋ ಫ್ಲಿಂಟ್‌ ಟ್ರೋಫಿ ಗೆ ಆಯ್ಕೆ ಮಾಡಿದೆ.
ಸ್ಮೃತಿ ಈವರೆಗೆ 4 ಟೆಸ್ಟ್, 62 ODI ಮತ್ತು 84 T20 ಪಂದ್ಯಗಳನ್ನು ಆಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ 8 ಪಂದ್ಯಗಲ್ಲಿ ಭಾರತ 2 ಪಂದ್ಯಗಳಲ್ಲಿ ಜಯಗಳಿಸಿದ್ದು, ಇವುಗಳಲ್ಲಿ ಸ್ಮೃತಿ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ನಲ್ಲಿ ಸ್ಮೃತಿ ಮೊದಲ ಇನ್ನಿಂಗ್ಸ್‌ ನಲ್ಲಿ 78 ರನ್‌ ಗಳಿಸಿದ್ದರು. ಇನ್ನು ಏಕದಿನ ಸರಣಿಯಲ್ಲಿ 49 ರನ್‌, ಟಿ20ಯಲ್ಲಿ ಅರ್ಧ ಶತಕ ಪಡೆದಿದ್ದರು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ 86 ರನ್ ಗಳಿಸಿದ್ದರು. ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಟೆಸ್ಟ್‌ನಲ್ಲಿ ತಮ್ಮ ಮೊದಲ ಶತಕ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!