SNACKS | ಸಂಜೆ ಟೈಮ್ ಟೀ, ಕಾಫಿ ಜೊತೆ ತಿನ್ನೋಕೆ ಗರಂ ಗರಂ ಕ್ಯಾಬೇಜ್ ಪಕೋಡ ರೆಸಿಪಿ ಟ್ರೈ ಮಾಡಿ

ಬೇಕಾಗುವ ಸಾಮಗ್ರಿ :

ಕ್ಯಾಬೇಜ್
ಈರುಳ್ಳಿ
ಕಡಲೆ ಹಿಟ್ಟು
ಅಕ್ಕಿ ಹಿಟ್ಟು,
ಒಂದು ಚಮಚ ಖಾರದ ಪುಡಿ
ಕಾಲು ಚಮಚ ಅರಿಶಿನ
ಚಿಟಿಕೆ ಇಂಗು
ಶುಂಠಿ-ಬೆಳ್ಳುಳ್ಳಿ ಪೇಸ್ಟ್,
ಕರಿಬೇವಿನ ಎಲೆ
ಉಪ್ಪು,
ಅಡುಗೆ ಎಣ್ಣೆ

ಮಾಡುವ ವಿಧಾನ :

ಒಂದು ಬೌಲ್ ನಲ್ಲಿ ಹೆಚ್ಚಿದ ಕ್ಯಾಬೇಜ್, ಈರುಳ್ಳಿ, ಕಡಲೆಹಿಟ್ಟು, ಅಕ್ಕಿ ಹಿಟ್ಟನ್ನು ಹಾಕಿ ನಂತರ ಅದಕ್ಕೆ ಅಚ್ಚಖಾರದ ಪುಡಿ, ಅರಿಶಿನ, ಇಂಗು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕರಿಬೇವಿನ ಎಲೆ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಅಗತ್ಯವಿದ್ದಲ್ಲಿ 2 ಚಮಚ ನೀರು ಬೆರೆಸಬಹುದು. ರೆಡಿ ಮಾಡಿದ ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿ ಬಿಸಿ ಎಣ್ಣೆಯಲ್ಲಿ ಫ್ರೈ ಮಾಡಿ. ಪಕೋಡ ಗರಿಗರಿಯಾಗುವವರೆಗೆ ಫ್ರೈ ಮಾಡಿ. ಇದೀಗ ಗರಂ ಗರಂ ಕ್ಯಾಬೇಜ್ ಪಕೋಡ ಸವಿಯಲು ಸಿದ್ದ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!