ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಮಾಲ್ನೊಳಗೆ 12 ಅಡಿ ಉದ್ದದ ಹಾವೊಂದು ತಪ್ಪಿಸಿಕೊಂಡಿದ್ದು, ಜನ ಹೆದರಿದ್ದಾರೆ.
ಅಮೆರಿಕದ ಲೂಸಿಯಾನಾದ ಬ್ಲೂ ಅಕ್ವೇರಿಯಂನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಹಳದಿ ಬಣ್ಣದ ಭಯಂಕರ ಹೆಬ್ಬಾವು ಹೊರಗೆ ಬಂದಿದೆ.
ಮಾಲ್ನಲ್ಲಿ 140 ಮಳಿಗೆ ಇದ್ದು, ಹಾವು ಎಲ್ಲಿ ಸೇರಿಕೊಂಡಿದೆ ಎಂದು ಯಾರಿಗೂ ತಿಳಿದಿಲ್ಲ. ಉರಗ ತಜ್ಞರು ಹುಡುಕಾಟ ನಡೆಸುತ್ತಿದ್ದು, ಇದುವರೆಗೂ ಪತ್ತೆಯಾಗಿಲ್ಲ. ಮಾಲ್ಗೆ ಬರುವವರಿಗೆ ನಿಷೇಧಿಸಿದ್ದು, ಮಾಲ್ ಒಳಗೆ ಇರುವವರನ್ನು ಹೊರಗೆ ಕಳಿಸಲಾಗಿದೆ.
ಮಾಲ್ನಲ್ಲಿ ಅಲಂಕಾರಕ್ಕಾಗಿ ಗೋಡೆಯಲ್ಲಿ ಕೆಲವು ರಂಧ್ರಗಳನ್ನು ಮಾಡಿದ್ದು, ಹಾವು ಅಲ್ಲಿಯೇ ಇರುವ ಸಾಧ್ಯತೆ ಇದೆ. ಆದರೆ ಆ ಗೋಡೆಗಳನ್ನು ಹೊಡೆದು ಬೀಳಿಸಿದರೂ ಹಾವು ಅಲ್ಲಿಯೂ ಇಲ್ಲ.ಇದು ಬರ್ಮೀಸ್ ಹಾವಾಗಿದ್ದು, ಮನುಷ್ಯರ ಮೇಲೆ ಆಕ್ರಮಣ ಮಾಡುವ ಸಾಧ್ಯತೆ ಕಡಿಮೆ. ಈ ಹಾವು ಮಾಲ್ನಿಂದ ಹೊರಹೋಗಿರುವ ಸಾಧ್ಯತೆಯೂ ಇದೆ. ಹಾಗಾಗಿ ಸುತ್ತಮುತ್ತಲಿನ ಮನೆಗಳಿಗೂ ಅಲರ್ಟ್ ಮಾಡಲಾಗಿದೆ. ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆಯೂ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಹಾವು ಕಂಡರೆ ಅದಕ್ಕೆ ಹಾನಿ ಮಾಡದೆ ಕರೆ ಮಾಡಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.