Wednesday, November 30, 2022

Latest Posts

ಹಾವು ಕಚ್ಚಿದ ಕೋಪಕ್ಕೆ ತಿರುಗಿ ಹಾವನ್ನು ಕಚ್ಚಿದ ಬಾಲಕ: ಮುಂದೇನಾಯ್ತು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಾವು ಕಚ್ಚಿದ್ದಕ್ಕೆ ಕೋಪಗೊಂಡ ಬಾಲಕನೊಬ್ಬ ತಿರುಗಿ ವಾಪಸ್ ಹಾವನ್ನು ಕಚ್ಚಿ ಕೊಂದು ಹಾಕಿದ್ದಾನೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಛತ್ತೀಸ್‌ಗಢದ ಜಶ್‌ಪುರ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬಾಲಕನೊಬ್ಬನಿಗೆ ಹಾವು ಕಚ್ಚಿದ್ದು,‌ ಕೋಪದಿಂದ ಹಾವನ್ನು ಬೆನ್ನಟ್ಟಿ ಹೋಗಿ ಕಚ್ಚಿ ಸಾಯಿಸಿದ್ದಾನೆ. ಹಾವು ಸಾವನ್ನಪ್ಪಿದ್ದು, ಬಾಲಕ ಬದುಕುಳಿದಿದ್ದಾನೆ.

ಜಶ್ಪುರ್ ಜಿಲ್ಲೆಯ ಪಂಡರ ಪಥ್ ಗ್ರಾಮದ ದೀಪಕ್ ರಾಮ್ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಪಕ್ಕದಲ್ಲಿದ್ದ ಪೊದೆಯಿಂದ ಹೊರಬಂದ ನಾಗರಹಾವು ಆತನ ಕೈಗೆ ಹಾವು ಕಚ್ಚಿದೆ. ಇದ್ದಕ್ಕಿದ್ದಂತೆ ಕೋಪಗೊಂಡ ಬಾಲಕ ಹಾವಿನ ಹಿಂದೆ ಹೋಗಿ ಕೈಯಲ್ಲಿ ಹಿಡಿದು ಗಾಬರಿಯಾಗದೆ ಹಾವಿನ ತಲೆಯ ಕೆಳಭಾಗವನ್ನು ಬಾಯಿಯಿಂದ ಕಚ್ಚಿ ಸಾಯಿಸಿದ್ದಾನೆ.

ಸಹೋದರನಿಗೆ ಹಾವು ಕಚ್ಚಿದೆ ಎಂದು ಅಕ್ಕ ಮನೆಯವರಿಗೆ ತಿಳಿಸಿದ್ದಾರೆ. ಕುಟುಂಬಸ್ಥರು ದೀಪಕ್ ನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ದೀಪಕ್ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!