ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿನ ಸ್ನ್ಯಾಪ್ ಚಾಟ್ ಇಂಡಿಯಾದ ಬಳಕೆ ಹೆಚ್ಚಾಗಿದ್ದು, ಮಾಸಿಕ 100 ಮಿಲಿಯನ್ ಬಳಕೆದಾರರನ್ನು ಹೊಂದಿರುವುದಾಗಿ ಸಂಸ್ಥೆಯ ಸಿಇಒ ಇವನ್ ಸ್ಪಿಗೆಲ್ ತಿಳಿಸಿದ್ದಾರೆ.
2021ರ ಆರಂಭದಲ್ಲಿದ್ದ 60 ಮಿಲಿಯನ್ ಬಳಕೆದಾರರಿಂದ ಸ್ನ್ಯಾಪ್ ಚಾಟ್, ಈಗ 100 ಮಿಲಿಯನ್ ಗ್ರಾಹಕರನ್ನು ಪಡೆಯುವ ಮೂಲಕ ಸಾಮಾಜಿಕ ಜಾಲತಾಣದ ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲು ತಲುಪಿದೆ.
ಈ ವೇಳೆ ಸ್ನ್ಯಾಪ್ ಚಾಟ್ ಸಂಸ್ಥೆ ಫ್ಲಿಪ್ ಕಾರ್ಟ್, ಜೊಮಾಟೋ, ಶುಗರ್ ಕಾಸ್ಮೆಟಿಕ್ಸ್ಮ ಮೈಗ್ಲಾಮ್ ಜೊತೆಗೆ ಎಆರ್ ಟೆಕ್ನಾಲಜಿ ಕೈಜೋಡಿಸಿದೆ ಎಂದು ತಿಳಿಸಿದರು.
ಕಳೆದ ಏಳು ತ್ರೈಮಾಸಿಕಗಳಲ್ಲಿ ಸಂಸ್ಥೆ ತನ್ನ ದೈನಂದಿನ ಸಕ್ರಿಯ ಬಳಕೆದಾರರನ್ನು ಶೇ. 100ರಷ್ಟು ಹೆಚ್ಚಾಗಿಸಿದೆ ಎಂದು ಸ್ನ್ಯಾಪ್ ಸಂಸ್ಥೆಯ ಅಂತಾರಾಷ್ಟ್ರೀಯ ಮಾರುಕಟ್ಟೆಗಳ ವ್ಯವಸ್ಥಾಪಕ ನಿರ್ದೇಶಕ ನಾನಾ ಮುರುಗೇಶನ್ ತಿಳಿಸಿದ್ದಾರೆ.
2019ರಲ್ಲಿ ಸ್ನ್ಯಾಪ್ ಚಾಟ್ ಭಾರತಕ್ಕೆ ಕಾಲಿಟ್ಟಿದ್ದು, ಅಂದಿನಿಂದ ಈವರೆಗೆ ಅಪ್ಲಿಕೇಷನ್ ಬಳಕೆದಾರರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಭಾರತದಲ್ಲಿ ಐದನೇ ಹೆಚ್ಚು ಡೌನ್ಲೋಡ್ ಮಾಡಿದ ಸಾಮಾಜಿಕ ಜಾಲತಾಣ ಇದಾಗಿದೆ.