ಒಡಿಶಾದ ಸಾಮಾಜಿಕ ಕಾರ್ಯಕರ್ತೆ, ಪದ್ಮಶ್ರೀ ಪುರಸ್ಕೃತೆ ಶಾಂತಿ ದೇವಿ ನಿಧನ: ಪ್ರಧಾನಿ ಮೋದಿ ಸಂತಾಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಡಿಶಾದ ಖ್ಯಾತ ಸಾಮಾಜಿಕ ಕಾರ್ಯಕರ್ತೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಶಾಂತಿ ದೇವಿ ವಿಧಿವಶರಾಗಿದ್ದಾರೆ.
ರಾಯಗಢ ಜಿಲ್ಲೆಯ ಗುನುಪುರದಲ್ಲಿರುವ ಅವರ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ನಿನ್ನೆ ತಡರಾತ್ರಿ ಏಕಾಏಕಿ ಎದೆ ನೋವು ಕಾಣಿಸಿದೆ, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

ಬುಡಕಟ್ಟು ಜನಾಂಗದ ಮಹಿಳೆಯರ ಅಭಿವೃದ್ಧಿಗಾಗಿ ಶಾಂತಿದೇವಿ ಶ್ರಮಿಸಿದ್ದರು. ಈ ಕಾರಣಕ್ಕೆ ಪದ್ಮಶ್ರೀ ಪ್ರಶಸ್ತಿಯೂ ಅವರನ್ನು ಅರಸಿ ಬಂತು. ಶಾಂತಿ ದೇವಿ ಅವರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
ಬಡವರು, ಹಿಂದುಳಿದವರ ಧ್ವನಿಯಾಗಿದ್ದ ಶಾಂತಿ ದೇವಿ ಅವರನ್ನು ಸದಾ ನೆನಪಿನಲ್ಲಿ ಇಡುತ್ತೇವೆ. ಬಡವರ ಕಷ್ಟಕ್ಕೆ ಮರುಗಿ, ಅವರಿಗಾಗಿ ಆರೋಗ್ಯಕರ ಸಮಾಜ ಸೃಷ್ಟಿಸಲು ಶಾಂತಿ ದೇವಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು. ಅವರ ಅಗಲಿಕೆಯಿಂದ ಅಪಾರ ದುಃಖವಾಗಿದೆ ಎಂದಿದ್ದಾರೆ.

17 ನೇ ವಯಸ್ಸಿನಲ್ಲೇ ವಿವಾಹವಾದ ಶಾಂತಿದೇವಿ ಅವರು ತಮ್ಮ ಪತಿಯೊಂದಿಗೆ ಕೋರಾಪುತ್‌ಗೆ ತೆರಳಿದ್ದರು. ಅಲ್ಲಿನ ಬುಡಕಟ್ಟು ಜನಾಂಗದ ಮಹಿಳೆಯರಿಗಾಗಿ ಶ್ರಮಿಸಿದ್ದರು. ಸಂಕಲ್ಪಧಾರ್ ಗ್ರಾಮದಲ್ಲಿ ಆಶ್ರಮ ಕಟ್ಟಿ, ಅನೇಕರಿಗೆ ಆಶ್ರಯ ನೀಡಿದ್ದರು. ಕುಷ್ಠರೋಗಿಗಳಿಗೂ ಆರೈಕೆ ಮಾಡಿದ್ದಾರೆ. ಜಮಯನಾಲಾಲ್ ಬಜಾಜ್ ಪ್ರಶಸ್ತಿ, ರಾಧಾನಾಥ್ ರಥ ಶಾಂತಿ ಪ್ರಶಸ್ತಿಗೂ ಅವರು ಭಾಜನರಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!