Friday, July 1, 2022

Latest Posts

ಕೊರೋನಾ ನಿಯಂತ್ರಣದಲ್ಲಿ ಸಾಮಾಜಿಕ ಅಂತರ ಅತ್ಯಂತ ಮುಖ್ಯ: ವಿಜಯ ರಾಘವನ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ವೈರಾಣುವಿನ ಮೂರನೇ ಅಲೆಯ ಬಗ್ಗೆ ಎಚ್ಚರಿಕೆ ನೀಡಿದ್ದ ಕೇಂದ್ರ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ.ವಿಜಯ ರಾಘವನ್ ಅವರು, ಇದೀಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್ ನಿಯಮಗಳ ಕಟ್ಟುನಿಟ್ಟಿನ ಪಾಲನೆಯಿಂದ ಮಾನವನಿಂದ ಮಾನವನಿಗೆ ಹರಡುವ ಕೊರೋನಾ ಸೋಂಕು ಹರಡುವಿಕೆಯ ತೀವ್ರತೆಯನ್ನು ಖಂಡಿತ ತಗ್ಗಿಸಬಹುದಾಗಿದೆ ಎಂದು ಗುರುವಾರ ಒತ್ತಿ ಹೇಳಿದ್ದಾರೆ .
ಕೊರೋನಾ ವೈರಾಣು ರೂಪಾಂತರಿಯೋ ಅಥವಾ ಅಲ್ಲವೋ ಎಂಬುದು ವಿಷಯವಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ಹರಡುವಿಕೆಯನ್ನು ತಗ್ಗುವಂತೆ ಮಾಡಲು ಸಹಕರಿಸಿ ಮತ್ತು ಇದರಿಂದ ಆಸ್ಪತ್ರೆಗಳ ಮೇಲಿನ ಒತ್ತಡವೂ ತಗ್ಗಲಿದೆ ಎಂದು ಅವರು ಹೇಳಿದರು. ಬುಧವಾರ ಅವರು ಮೂರನೇ ಅಲೆ ಕುರಿತಂತೆ ನೀಡಿದ್ದ ಹೇಳಿಕೆ ಮಾಧ್ಯಮಗಳಲ್ಲಿ ಭಾರೀ ಗುಲ್ಲೆಬ್ಬಿಸಿತ್ತು. ಅವರು ಮೂರನೇ ಸಂಭಾವ್ಯ ಅಲೆ ಯಾವಾಗ ಬರಬಹುದೆಂದು ಹೇಳಲಾಗದು. ಆದರೂ ಕುರಿತಂತೆ ಜನತೆ ಈಗಲೇ ಜಾಗೃತರಾಗಿರಬೇಕು ಎಂದು ಜನತೆಗೆ ಕಿವಿಮಾತು ಹೇಳಿದ್ದರು. ಆದರೆ ಮಾಧ್ಯಮಗಳು ಇದಕ್ಕೆ ಬೇರೆ ಸ್ವರೂಪ ನೀಡಿ ಭಾರೀ ಆಘಾತಕಾರಿ ಸುದ್ದಿ ಎಂಬಂತೆ ಭೀತಿಯ ಸುದ್ದಿಯಾಗಿಸಿದ್ದರಿಂದ ಆತಂಕ ಸೃಷ್ಟಿಯಾಗಿತ್ತು.
ಲಾಕ್‌ಡೌನ್ ಇಲ್ಲದೆ ಇರುವ ಈ ಸಂದರ್ಭ ಸಾಮಾಜಿಕ ಅಂತರ ಎಷ್ಟು ಮುಖ್ಯ ಎಂಬುದನ್ನು ಜನತೆಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಈ ಮಾತನ್ನು ಹೇಳುತ್ತಿದ್ದೇನೆ ಎಂದು ಅವರು ತಿಳಿಸಿದರು. ದೇಶದಲ್ಲಿ ಗುರುವಾರ ೪.೧೨ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ.
ಈಗ ನಾವು ಎಲ್ಲ ಆರೋಗ್ಯ ಕಾರ್ಯಕರ್ತರು,ಮುಂಚೂಣಿ ಕೆಲಸಗಾರರು, ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.
ಮಹಾರಾಷ್ಟ್ರ, ಕರ್ನಾಟಕ, ಕೇರಳ, ಹರ್ಯಾಣ, ಪ.ಬಂ., ತಮಿಳ್ನಾಡು, ಆಂಧ್ರಪ್ರದೇಶ, ರಾಜಸ್ತಾನಗಳಲ್ಲಿ ವರದಿಯಾಗುತ್ತಿರುವ ಪ್ರಕರಣಗಳು ದೇಶದ ಒಟ್ಟು ಹೊಸ ಕೊರೋನಾ ಪ್ರಕರಣಗಳ ಶೇ.೭೨.೧೯ರಷ್ಟಿವೆ ಎಂಬುದು ಆಘಾತಕ್ಕೆ ಕಾರಣವಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss