ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದ ನೀಲಿ ಕಣ್ಣಿನ ಯುವತಿಯೊಬ್ಬಳು ರಾತ್ರೋ ರಾತ್ರಿ ಇಂಟರ್ನೆಟ್‌ನ ಸೆನ್ಸೇಷನ್ ಆಗಿದ್ದಳು. ಆಕೆಯ ನಡೆ, ನುಡಿ, ಮಾತುಕತೆ, ಅಂದಕ್ಕೆ ಸೋಶಿಯಲ್ ಮೀಡಿಯಾ ಮಾರು ಹೋಗಿತ್ತು. ಕುಂಭಮೇಳದಲ್ಲಿ ಆಕೆಯನ್ನು ನೋಡಲು ಹಾಗೂ ಮೀಟ್ ಮಾಡಲು ಕೆಲವರು ಆಸಕ್ತಿ ತೋರಿದ್ದರು. ಇಷ್ಟೆಲ್ಲಾ ಆದ ನಂತರ ಇದೀಗ ಯುವತಿ ಕುಂಭಮೇಳ ಬಿಟ್ಟು ತಮ್ಮೂರಿಗೆ ವಾಪಾಸ್ ಹೋಗಿದ್ದಾಳೆ.
ವೈರಲ್ ಆಗಿದ್ದ ಮೊನಾಲಿಸಾ ಎಂಬ ಯುವತಿ ಇಂದೋರ್‌ನವಳು. ರುದ್ರಾಕ್ಷಿ ಮಾರಲೆಂದು ಕುಂಭಮೇಳಕ್ಕೆ ಬಂದಿದ್ದಳು ಎನ್ನಲಾಗಿದೆ. ಆಕೆಯ ತಂದೆ ಸೋಶಿಯಲ್ ಮೀಡಿಯಾದಲ್ಲಿ ಮಗಳ ವಿಡಿಯೋಗಳನ್ನು ನೋಡಿ ಮನೆಗೆ ವಾಪಾಸ್ ಬರುವಂತೆ ಹೇಳಿದ್ದಾರೆ. ಅಂತೆಯೇ ನೀಲಿ ಕಂಗಳ ಚೆಲುವೆ ತಮ್ಮೂರಿಗೆ ವಾಪಾಸ್ ಆಗಿದ್ದಾರೆ ಎನ್ನಲಾಗಿದೆ.
ನಮ್ಮ ಕನ್ನಡ ವಾಹಿನಿಗಳು ಹನುಮಂತನನ್ನು ಬಳಸಿ ಮಾಧ್ಯಮ ಪ್ರಸಾರ ಹೆಚ್ಚಿಸಿಕೊಂಡು ಹಣ ದೋಚಿ ಮುಗ್ಧನಿಗೆ ದೊಡ್ಡ ದೊಡ್ಡ ಆಶ್ವಾಸನೆಗಳಷ್ಟೇ ಸೀಮಿತವಾದುವು.