ಹೊಸದಿಗಂತ ಆನ್ಲೈನ್ ಡೆಸ್ಕ್:
ನಾಸಾದ ಪರ್ಸಿವರೆನ್ಸ್ ರೋವರ್ ಮಂಗಳನ ಅಂಗಳದಲ್ಲಿ ಗುರುವಾರ ಯಶಸ್ವಿಯಾಗಿ ಲ್ಯಾಂಡ್ ಆಗಿದೆ.
ರೋವರ್ನನ್ನು ನಿಗದಿತ ಸ್ಥಳದಲ್ಲಿ ಲ್ಯಾಂಡ್ ಆಗುವಂತೆ ನಿರ್ದೇಶನ ನೀಡಿದವರಲ್ಲಿ ಭಾರತೀಯ ಅಮೆರಿಕನ್ ವಿಜ್ಞಾನಿ ಸ್ವಾತಿ ಮೋಹನ್ ಕೂಡ ಇದ್ದಾರೆ.
ಪುಟ್ಟದೊಂದು ಬಿಂದಿ ಇಟ್ಟಿರುವ ಸ್ವಾತಿ ಇದೀಗ ಸಾಮಾಜಿಕ ಜಾಲತಾಣದ ಸೆನ್ಸೇಶನ್ ಆಗಿದ್ದಾರೆ. ದೇಸೀ ನೆಟ್ಟಿಗರಿಗೆ ಸ್ವಾತಿ ಅವರು ಬಿಂದಿ ಇಟ್ಟಿರುವುದು ತುಂಬಾನೇ ಖುಷಿ ಕೊಟ್ಟಿದೆ. ಹಲವರು ಸ್ವಾತಿ ಅವರ ಚಿತ್ರವನ್ನು ವೈರಲ್ ಮಾಡಿದ್ದಾರೆ.
ಲೇಡಿ ವಿತ್ ದ ಬಿಂದಿ ಎಂದೇ ಸ್ವಾತಿ ಮೋಹನ್ ಅವರ ಹೆಸರನ್ನು ಬಳಸುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಅಮೆರಿಕಗೆ ತೆರಳಿದ್ದರೂ ಭಾರತೀಯ ಸಂಸ್ಕೃತಿಯ ಬಿಂದಿ ಧರಿಸಿರುವ ಸ್ವಾತಿ ಅವರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.