ಸಮಾಜ ಸುಧಾರಣೆಯಲ್ಲಿ ಪತ್ರಕರ್ತರ ಪಾತ್ರ ದೊಡ್ಡದು: ಜಿಲ್ಲಾಧಿಕಾರಿ ಗುರುಕರ್

ಹೊಸ ದಿಗಂತ ವರದಿ, ಕಲಬುರಗಿ:

ಸಮಾಜ ಸುಧಾರಣೆಯಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾದಿಕಾರಿ ಯಶ್ವಂತ ಗುರುಕರ ಹೇಳಿದರು.
ನಗರದ ಹೆಚ್‍ಕೆಸಿಸಿಐ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಪದಗ್ರಹಣ, ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಹಾಗೂ ಮತದಾರ ಪತ್ರಕರ್ತರಿಗೆ ಕೃತಜ್ಞತೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೆಗಳು ನಿಖರ ಮತ್ತು ಸತ್ಯ ಸಂಗತಿಗಳ ಸುದ್ದಿ ಪ್ರಸಾರ ಮಾಡಬೇಕು ಎಂದರು.
ತಪ್ಪು ಮಾಹಿತಿ ನೀಡಬಾರದು. ಜನರು ಪತ್ರಿಕೆಗಳ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ಹೀಗಾಗಿ ತಪ್ಪು ಮಾಹಿತಿ ನೀಡಿದರೆ ಅದೇ ಸರಿ ಎಂದು ಭಾವಿಸುತ್ತಾರೆ. ಜನರನ್ನು ಹಾದಿ ತಪ್ಪಿಸುವಂಥ ಕೆಲಸ ಪತ್ರಕರ್ತರು ಮಾಡಬಾರದು. ಜನರಿಗೆ ಉಪಯುಕ್ತವಾಗುವ ಮಾಹಿತಿ ಪ್ರಕಟಿಸಬೇಕು ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ಕ್ರಿಯಾಶಿಲ ಪತ್ರಕರ್ತರು ಸಂಘದಲ್ಲಿದ್ದರೆ ಸಂಘದ ಬೆಳವಣಿಯಾಗಲು ಸಾಧ್ಯ ಎಂದರು. ಸಮಾಜ ನಮಗೆ ಗೌರವ ಕೊಡುವಂತ ವ್ಯಕ್ತಿತ್ವ ನಮ್ಮದಾಗಬೇಕು. ವೃತ್ತಿಗೆ ಕಪ್ಪು ಚುಕ್ಕಿ ತರುವಂಥ ಕೆಲಸ ಮಾಡಬಾರದು ಎಂದು ಕಿವಿಮಾತು ಹೇಳಿದ ಅವರು, ಸಂಘದಿಂದ ಪತ್ರಕರ್ತರಿಗೆ ಸೌಲಭ್ಯ ಮಾಡಿಕೊಡಲು ಪ್ರಯತ್ನಿಸುದಾಗಿ ಭರವಸೆ ನೀಡಿದರು.
ನಗರ ಪೊಲೀಸ್ ಆಯುಕ್ತ ಡಾ. ವೈ.ಎಸ್. ರವಿಕುಮಾರ, ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ, ಮಾಧ್ಯಮ ಅಕಾಡೆಮಿ ಸದಸ್ಯ ದೇವೀಂದ್ರಪ್ಪ ಕಪನೂರ, ಜಿಲ್ಲಾ ಸಮಿತಿಯ ಖಜಾಂಚಿ ಅಶೋಕ ಕಪನೂರ, ವಾರ್ತಾ ಮತ್ತು   ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಉಪನಿರ್ದೇಶಕ ಜೆ.ಬಿ. ಸಿದ್ದೇಶ್ವರಪ್ಪ ವೇದಿಕೆ ಮೇಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!