spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಾಮಾಜಿಕ ನ್ಯಾಯದ ಆಧಾರ ಮೇಲೆ ಸಚಿವ ಸ್ಥಾನ : ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………

ಹೊಸ ದಿಗಂತ ವರದಿ, ಚಿತ್ರದುರ್ಗ :

ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಎಲ್ಲ ವರ್ಗದವರಿಗೆ ಸ್ಥಾನ ನೀಡಿದ್ದಾರೆ. ಅದರಂತೆ ರಾಜ್ಯದಲ್ಲೂ ಸ್ಥಾನ ನೀಡಲಿದ್ದಾರೆ. ನಾನು ಹಿರಿಯ ರಾಜಕಾರಿಣಿ, ಹಾಗಾಗಿ ನನಗೆ ಸಚಿವ ಸ್ಥಾನ ದೊರೆಯುವ ನಿರೀಕ್ಷೆ ಇದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ನಿರ್ಮಿಸಿರುವ ನೂತನ ಅತಿಥಿ ಗೃಹ ಉದ್ಘಾಟಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿ, ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಭವಿ ರಾಜಕಾರಣಿ. ಗೃಹ ಸಚಿವರಾಗಿ ಕೆಲಸ ಮಾಡಿದವರು. ಅವರ ತಂದೆ ಜನತಾ ಪರಿವಾರದಲ್ಲಿ ಪಕ್ಷ ಕಟ್ಟಿ, ರಾಜ್ಯ ಮತ್ತು ಕೇಂದ್ರದ ಮಂತ್ರಿ ಆಗಿದ್ದವರು ಎಂದರು.
ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯವನ್ನು ಸುತ್ತಿದ್ದಾರೆ. ಜಿಲ್ಲೆಯ ಸಮಸ್ಯೆಗಳ ಕುರಿತು ಗೊತ್ತಿದೆ. ನೀರಾವರಿ ಸಚಿವರಾಗಿ, ಗೃಹ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ತುಂಬಾ ತಾಳ್ಮೆಯ ಗುಣ ಇರುವ ನಾಯಕ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಶೀರ್ವಾದ ಮಾಡಿದ್ದಾರೆ. ವಿಪಕ್ಷದ ನಾಯಕರು ಕೂಡ ಉತ್ತಮ ನಾಯಕ ಎಂದಿದ್ದಾರೆ ಎಂದು ಹೇಳಿದರು.
ರಾಜ್ಯದ ಬೆಳವಣಿಗೆ, ಪಕ್ಷ ಕಟ್ಟಲು ನಾವು ಜೊತೆಗೆ ಇರುತ್ತೇವೆ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿರುವುದು ನಮಗೆ ತುಂಬಾ ಸಂತೋಷ ಇದೆ. ನಾನು ಸಚಿವನಾಗುವ ಕುರಿತು ಸಿಎಂ ಮತ್ತು ಹೈಕಮಾಂಡ್ ಜೊತೆ ಚರ್ಚೆ ಮಾಡಬೇಕಿದೆ. ನಮ್ಮ ಜಿಲ್ಲೆಗೆ ಮತ್ತೊಂದು ಅವಕಾಶ ಸಿಗುವ ನಿರೀಕ್ಷೆ ಇದೆ. ರಾಜ್ಯ ಮತ್ತು ಕೇಂದ್ರದ ನಾಯಕರು ಈ ಕುರಿತು ಸೂಕ್ತ ತೀರ್ಮಾನ ಮಾಡಲಿದ್ದಾರೆ ಎಂದರು.
ನನಗೆ ಮೊದಲಿಂದಲೂ ಬಸವರಾಜ ಬೊಮ್ಮಾಯಿ ಆತ್ಮೀಯರು. ನಮ್ಮ ಕುಟುಂಬದ ಬಗ್ಗೆ ಸಹ ಅವರಿಗೆ ಮಾಹಿತಿ ಇದೆ. ೫೦ ವರ್ಷದಿಂದ ವಿಧಾನಸಭೆಯಲ್ಲಿ ಇದ್ದೀರ. ಚುನಾವಣೆಯಲ್ಲಿ ಗೆಲ್ಲುತ್ತೀರ, ಬಳಿಕ ಜನ ಸೇವೆ ಮಾಡುತ್ತೀರ. ಆದರೆ ಮೆಲ್ಮಟ್ಟದ ರಾಜಕಾರಣ ಮಾಡಲ್ಲ ಎಂದು ಬೊಮ್ಮಾಯಿ ಈ ಹಿಂದೆ ನನಗೆ ಹೇಳಿದ್ದರು ಎಂದು ನೆನಪಿಸಿಕೊಂಡರು.
ಸಚಿವ ಸ್ಥಾನ ಕೊಟ್ಟರೆ ಅವರ ಜೊತೆ ಖುಷಿಯಿಂದ ಕೆಲಸ ಮಾಡುವೆ. ಹಾಗಾಗಿ ಸ್ವಲ್ಪ ಬೆಂಗಳೂರಿಗೆ ಓಡಾಟ ಮಾಡುತ್ತಿದ್ದೇನೆ. ಪರ – ವಿರೋಧ ಮಾಡಬಾರದು ಎಂದು ಸೂಕ್ಷ್ಮವಾಗಿ ಹೈಕಮಾಂಡ್ ಹೇಳಿದೆ. ದೆಹಲಿಗೆ ಹೋಗಬೇಕು ಎಂದು ಅಂದುಕೊಂಡಿದ್ದೇನೆ. ದೆಹಲಿಗೆ ಹೋದರೆ ನಮ್ಮ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೇನೆ. ಜೂನ್ – ಜುಲೈನಲ್ಲಿ ಕೊಡುತ್ತೇವೆ ಎಂದು ಹೇಳಿದ್ದರು. ಸಿಕ್ಕರೆ ಸಂತೋಷ, ಸಿಗಲಿಲ್ಲ ಎಂದು ಕೊರಗಲ್ಲ. ಜನ ಇದ್ದರೆ ನನಗೆ ಖುಷಿ. ಹಾಗಾಗಿ ಸಂತೋಷದಿಂದ ಜನಸೇವೆ ಮಾಡುತ್ತೇನೆ ಎಂದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss