ವಾವ್… ಬಲೂನಿನಂತೆ ಭಾಸವಾಗುವ ಬೆಲುಗಾ ತಿಮಿಂಗಿಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಗರಗಳಲ್ಲಿನ ತಿಮಿಂಗಿಲಗಳ ಬಗ್ಗೆ ಕೆಲ ಕುತೂಹಲಕಾರಿ ಸಂಗತಿಗಳನ್ನು ನಾವು ಬಹಳಷ್ಟು ಕೇಳುತ್ತೇವೆ. ಅಂಥದ್ದೇ ಒಂದು ಕುತೂಹಲಕಾರಿ ವಿಡಿಯೋವೊಂದು ಇದೀಗ ವೈರಲ್‌ ಆಗಿದೆ. ಈ ವಿಡಿಯೋದಲ್ಲಿರುವ ಬಿಳಿ ತಿಮಿಂಗಿಲ ಅತ್ಯಂತ ಸಾಫ್ಟ್‌ ಆಗಿದ್ದು, ನೋಡೋದಕ್ಕೆ ಅದರ ತಲೆ ಥೇಟ್ ರಬ್ಬರ್ ರೀತಿಯಲ್ಲಿದೆ. ಈ ತಿಮಿಂಗಿಲಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಲುಗಾ ವೇಲ್ ವಿಡಿಯೋವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ತಿಮಿಂಗಿಲದ ತಲೆಯನ್ನು ಅಕ್ವೇರಿಯಂಗೆ ಭೇಟಿ ನೀಡಿದ ವ್ಯಕ್ತಿಯೊಬ್ಬರು ಕೈಯಿಂದ ಸ್ಪರ್ಶಿಸಿದರೆ ಅದು ಮೃದುವಾಗಿ ಸ್ಪಾಂಜ್ ರೀತಿ ಒಳಗೆ ಹೋಗಿ ಮತ್ತೆ ಆಚೆ ಬರುವುದನ್ನು ನೋಡಲು ಮಜವಾಗಿದೆ. ತಿಮಿಂಗಲದ ತಲೆಯನ್ನು ಒತ್ತಿದರೆ ಅದು ತನ್ನ ಬಾಯಿಯನ್ನು ತೆರೆಯುತ್ತದೆ. ಅದರ ತಲೆಯನ್ನು ಮುಟ್ಟಿದ ಸಂದರ್ಶಕನು ಅದರ ಬಾಯಿಗೆ ಚೇಳನ್ನು ಎಸೆದಿದ್ದಾನೆ. ಎಸೆದ ಚೇಳನ್ನು ತಿಮಿಂಗಲ ಗುಳುಕ್‌ ಎಂದು ನುಂಗಿರುವ  ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!