Wednesday, August 10, 2022

Latest Posts

ಸೌರ ಒಲೆ: ಹೀಗೊಂದು ಅನ್ವೇಷಣೆ

(ಪ್ರಾತಿನಿಧಿಕ ಚಿತ್ರ)

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೇಂದ್ರ ಮೆಕ್ಯಾನಿಕಲ್ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಸಿ ಎಂ ಇ ಆರ್ ಐ) ಸೌರ ತಂತ್ರಜ್ಞಾನದ ಮೂಲಕ ಅಡುಗೆ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಎರಡು ಬೃಹತ್ ಸೌರ ಸಂಸ್ಥೆಗಳಿಗೆ ವರ್ಗಾಯಿಸಿದೆ. ಇದೀಗ ಶೀಘ್ರದಲ್ಲಿಯೇ ಈ ಅಡುಗೆ ಸಾಧನಗಳು ಮಾರುಕಟ್ಟೆಗೆ ಬರಲಿವೆ.
ಈ ವಿಶಿಷ್ಟ ತಂತ್ರಜ್ಞಾನದ ಮೂಲಕ ಸೋಲಾರ್ ಪ್ಯಾನಲ್, ಚಾರ್ಜ್ ಕಂಟ್ರೋಲರ್, ಬ್ಯಾಟರಿ ಬ್ಯಾಂಕ್ ಸೇರಿದಂತೆ ಒವೆನ್ ಕೂಡ ಲಭ್ಯವಾಗಲಿದೆ. ಅಸನ್ಸೋಲ್ ಸೋಲಾರ್ –ಎಲ್ ಇಡಿ ಹೌಸ್ ಹಾಗೂ ಡಬ್ಲ್ಯುಬಿ ಮತ್ತು ಮೀಕೋ ಸೋಲಾರ್ ಇನ್ ಫ್ರಾಸ್ಟ್ರಕ್ಚರ್ ಸಂಸ್ಥೆಗಳು ಇದೀಗ ಈ ತಂತ್ರಜ್ಞಾನವನ್ನು ಬಳಸಿ ಅಡುಗೆ ಸಾಧನವನ್ನು ತಯಾರಿಸಲಿವೆ.
ಈಗೇನೂ ಅಡುಗೆ ಮಾಡುವುದಕ್ಕೆ ಸೌರ ಸಾಧನಗಳು ಮಾರುಕಟ್ಟೆಯಲ್ಲಿಲ್ಲ ಎಂದೇನಲ್ಲ. ಈ ತಂತ್ರಜ್ಞಾನದ ವಿಶೇಷ ಎಂದರೆ ಇದು ಡಿಸಿ ವಿದ್ಯುತ್ (ಡೈರೆಕ್ಟ್ ಕರೆಂಟ್) ಉಪಯೋಗಿಸಿಕೊಂಡು ಕಾರ್ಯನಿರ್ವಹಿಸುತ್ತದೆ. ಇದು ಎಸಿ ಸೋಲಾರ್ ಗಿಂತ ಶೇ.20-25ರಷ್ಟು ಹೆಚ್ಚು ಕಾರ್ಯ ಕ್ಷಮತೆಯನ್ನು ಹೊಂದಿದೆ.
ಮುಖ್ಯವಾಗಿ ಸಣ್ಣ ಕೈಗಾರಿಕಾ ಸಂಸ್ಥೆಗಳಿಗೆ ಇದರಿಂದ ಸಹಾಯವಾಗಲಿದೆ. ವ್ಯವಹಾರಿಕ ಬಳಕೆಗೆ ಇದು ಹೆಚ್ಚು ಸೂಕ್ತವಾಗಿದ್ದು ಲಾಭದಾಯಕವಾಗಿದ್ದು, 65-70 ಸಾವಿರ ರೂ. ಮಾರುಕಟ್ಟೆ ದರ ಇರಲಿದೆ.
ಸೌರ ಅಡುಗೆ ಸಾಧನಗಳ ಬಳಕೆ ಪರಿಸರ ಸ್ನೇಹಿಯಾಗಿದ್ದು, ಇಂಗಾಲದ ವಿಸರ್ಜನೆ ಪ್ರಮಾಣ ತಗ್ಗಿಸುವಲ್ಲಿ ಕೊಡುಗೆ ನೀಡುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss