ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಸೋಮವಾರಪೇಟೆ:
ಇಲ್ಲಿನ ಪಟ್ಟಣ ಪಂಚಾಯಿತಿಯ ಎರಡು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿ.ಜೆ.ಪಿ. ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ.
ವಾರ್ಡ್ ನಂ 1 ರಲ್ಲಿ ಚಲಾವಣೆಯಾದ 355 ಮತಗಳಲ್ಲಿ ಬಿ.ಜೆ.ಪಿಯಿಂದ ಸ್ಪರ್ಧಿಸಿದ್ದ ಮೃತ್ಯುಂಜಯ 254 ಮತಗಳನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ. ಕಾಂಗ್ರೇಸ್ ನ ಭುವನೇಶ್ ಕೇವಲ 75 ಮತಗಳಿಸಿ ಸೋಲುಂಡಿದ್ದಾರೆ.ಉಳಿದಂತೆ ಜೆ.ಡಿ.ಎಸ್. ನ ಗಿರೀಶ್ 19 ಹಾಗೂ ಪಕ್ಷೇತರ ರವಿ 4 ಮತಗಳಿಸಿದ್ದು 3 ನೋಟಾ ಮತ ಚಲಾವಣೆಯಾಗಿದೆ.
ಈ ಹಿಂದೆ ಈ ವಾಡ್೯ ನಲ್ಲಿ ಕಾಂಗ್ರೆಸ್ ನ ಉದಯಶಂಕರ್ ಜಯಗಳಿಸಿದ್ದರು.ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಬಿ.ಜೆ.ಪಿ ಗೆಲ್ಲುವ ಮೂಲಕ ತಮ್ಮ ಸದಸ್ಯ ಸಂಖ್ಯೆ ಹೆಚ್ಚಿಸಿಕೊಂಡಿದೆ.
ಅತ್ತೆ ಸ್ಥಾನಕ್ಕೆ ಸೊಸೆ ಆಯ್ಕೆ: ಭಾರಿ ಕುತೂಹಲ ಕೇರಳಿಸಿದ್ದ ವಾರ್ಡ್ ನಂ 3 ರಲ್ಲಿ ಬಿಜೆಪಿ ಪುನಃ ಗೆಲ್ಲುವ ಮೂಲಕ ತನ್ನ ಸ್ಥಾನ ಉಳಿಸಿಕೊಂಡಿದೆ.
ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಸ್ಥಾನಕ್ಕೆ ಈ ಹಿಂದೆ ಪರಿಶಿಷ್ಟ ಜಾತಿಗೆ ಸೇರಿದ ನಳಿನಿ ಗಣೇಶ್ ಜಯಗಳಿಸಿ ನಂತರ ಬಂದ ಮೀಸಲಾತಿಯಿಂದ ಅಧ್ಯಕ್ಷೆಯಾಗಿಯೂ ಆಯ್ಕೆಯಾಗಿದ್ದರು. ನಂತರ ಕೋವಿಡ್ ನಿಂದ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಬಿ.ಜೆ.ಪಿ ಅವರ ಸೊಸೆ ಮೋಹಿನಿ ಅವರನ್ನು ಕಣಕ್ಕಿಳಿಸುವ ಮೂಲಕ ರಾಜಕೀಯ ದಾಳ ಉರುಳಿಸಿ ಯಶಸ್ವಿಯಾಗಿದೆ.
ವಾರ್ಡ್ ನಂ 3ರಲ್ಲಿ ಚಲಾವಣೆಯಾದ 404 ಮತಗಳಲ್ಲಿ ಬಿ.ಜೆ.ಪಿಯ ಮೋಹಿನಿ 216 ಮತಗಳಿಸಿ ಜಯಶೀಲರಾಗಿದ್ದಾರೆ.ಕಾಂಗ್ರೆಸ್ ನ ಸಂಧ್ಯಾ 168 ಮತಗಳಿಸಿ ಪೈಪೋಟಿ ನೀಡಿದರೆ, ಕಳೆದ ಬಾರಿ ಪ್ರಬಲ ಸ್ಪರ್ಧೆಯೊಡ್ಡಿದ್ದ ಜೆ.ಡಿ.ಎಸ್.ನ ಪುಷ್ಪ ಈ ಬಾರಿ ಕೇವಲ 17 ಮತಗಳನ್ನು ಮಾತ್ರ ಪಡೆದಿದ್ದಾರೆ ಉಳಿದಂತೆ 3 ನೋಟಾ ಮತದಾನವಾಗಿದೆ.
ಬಿ.ಜೆ.ಪಿ.ವಿಜಯೋತ್ಸವ: ಉಪ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬಿ.ಜೆ.ಪಿ., ಶಾಸಕ ರಂಜನ್ ನೇತೃತ್ವದಲ್ಲಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ ವಿಜಯೋತ್ಸವ ನಡೆಸಿತು.
ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ರಂಜನ್, ಪಟ್ಟಣದ ಮತದಾರರು ಪಕ್ಷದ ಮೇಲೆ ವಿಶ್ವಾಸವಿಟ್ಟು ಎರಡು ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಅವರ ನಿರೀಕ್ಷೆಯಂತೆ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.
ಪಂಚಾಯಿತಿಯಲ್ಲಿ ಹೆಚ್ಚಿನ ಸ್ಥಾನಗಳು ಗಳಿಸಿರುವುದರಿಂದ ನಾವೇ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂದರು.
ಅಧಿಕಾರ ಚುಕ್ಕಾಣಿ ಹಿಡಿಯಲಿರುವ ಬಿ.ಜೆ.ಪಿ: ಪಂಚಾಯ್ತಿಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು ಇಬ್ಬರೂ ಬಿ.ಜೆ.ಪಿಯಲ್ಲೇ ಇರುವುದರಿದ ಅಧ್ಯಕ್ಷ ಸ್ಥಾನ ನಿರಾಯಾಸವಾಗಿ ಬಿ.ಜೆ.ಪಿ.ಪಾಲಾಗಲಿದೆ.
ಈ ಹಿಂದೆ 11 ಸ್ಥಾನಗಳ ಪೈಕಿ ಮೈತ್ರಿ ಕೂಟದ ಕಾಂಗೆಸ್ 4 ,ಜೆ.ಡಿ.ಎಸ್.3, ಸೇರಿ 7 ಸ್ಥಾನ ಗಳಿಸಿತ್ತು. ಬಿ.ಜೆ.ಪಿ 3,ಪಕ್ಷೇತರ 1ಸ್ಥಾನ ಗಳಿಸಿದ್ದವು. ಇದೀಗ ಕಾಂಗ್ರೆಸ್, ಜೆ.ಡಿ.ಎಸ್ ಮೈತ್ರಿಕೂಟ ಮುರಿದು ಬಿದ್ದಿದ್ದು ಕಾಂಗ್ರೆಸ್ 1 ಸ್ಥಾನ ಕಳೆದುಕೊಳ್ಳುವ ಮೂಲಕ 3 ಸದಸ್ಯರನ್ನು ಹೊಂದಿದೆ. ಬಿ.ಜೆ.ಪಿ. 1 ಸ್ಥಾನ ಹೆಚ್ಚಿಗೆ ಗೆಲ್ಲುವ ಮೂಲಕ 4 ಸದಸ್ಯರು ಹಾಗೂ ಪಕ್ಷೇತರ 1 ಸೇರಿ ಒಟ್ಟು 5 ಸದಸ್ಯ ಬಲ ಹೊಂದಿದ್ದರೆ ಜೆ.ಡಿ.ಎಸ್ 3 ಸದಸ್ಯರನ್ನು ಹೊಂದಿದೆ.
ಅಧ್ಯಕ್ಷ ,ಉಪಾಧ್ಯಕ್ಷ ಚುನಾವಣೆಯಲ್ಲಿ ಶಾಸಕರು ಹಾಗೂ ಲೋಕಸಭಾ ಸದಸ್ಯರು ಮತ ಚಲಾಯಿಸಬಹುದಾದ್ದರಿಂದ ಬಿ.ಜೆ.ಪಿ. 7 ಮತಗಳನ್ನು ಪಡೆದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ಪಡೆಯಬಹುದಾಗಿದೆ.
ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಆ)ಗೆ ಮೀಸಲಾಗಿದ್ದು, ಹಿಂದೆ 7 ಸ್ಥಾನಗಳಿದ್ದ ಮೈತ್ರಿಕೂಟದ ಕಾಂಗ್ರೆಸ್ ಬಿ.ಸಂಜೀವ ಉಪಾಧ್ಯಕ್ಷರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜಯಂತಿ ಶಿವಕುಮಾರ್ ಆಯ್ಕೆಯಾಗಿದ್ದರು.ಇದೀಗ ಬಿ.ಜೆ.ಪಿ.ಸದಸ್ಯರ ಸಂಖ್ಯೆ ಹೆಚ್ಚಿರುವುದರಿಂದ ಉಪಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಬದಲಾವಣೆಯಾಗುವ ಸಾಧ್ಯತೆ ಇದೆ.