spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜನರನ್ನು ಅರ್ಥ ಮಾಡಿಕೊಳ್ಳೋದೇ ಕಷ್ಟವಾ? ಮನುಷ್ಯರ ನಡವಳಿಕೆ ಬಗ್ಗೆ fun facts ಇಲ್ಲಿದೆ..

- Advertisement -Nitte

ಮನುಷ್ಯರ ಬಿಹೇವಿಯರ್‌ನಿಂದ ಅವರೆಂತಹ ವ್ಯಕ್ತಿ ಅನ್ನೋದನ್ನು ಜನ ಅಳೆದುಬಿಡುತ್ತಾರೆ. ಕೆಲವೊಮ್ಮೆ ಅವರ ಬಿಹೇವಿಯರ್‌ನನ್ನು ತಪ್ಪಾಗಿ ತಿಳಿದುಕೊಂಡು ತಪ್ಪು ನಿರ್ಧಾರಗಳನ್ನು ಕೂಡ ತೆಗೆದುಕೊಂಡುಬಿಡುತ್ತೇವೆ. ಮನುಷ್ಯನ ಬಿಹೇವಿಯರ್ ಬಗ್ಗೆ ನಿಮಗೆ ಗೊತ್ತೇ ಇಲ್ಲದ ಫನ್ ಫ್ಯಾಕ್ಟ್ಸ್ ಇಲ್ಲಿದೆ…

  • ನಿಮಗೆ ಯಾರಾದರೂ ಸುಳ್ಳು ಹೇಳುತ್ತಿದ್ದರೆ ಅವರು ಹೆಚ್ಚಾಗಿ ಮೇಲೆ ನೋಡುತ್ತಾರೆ ಅಥವಾ ತಮ್ಮ ಎಡಗಡೆ ನೋಡುತ್ತಾರಂತೆ.
  • ಹೆಚ್ಚು ಐಕ್ಯೂ ಹೊಂದಿರುವ ಮಹಿಳೆಯರಿಗೆ ಸಂಗಾತಿ ಹುಡುಕೋದೇ ಕಷ್ಟದ ಕೆಲಸವಂತೆ. ಇವರ ಐಕ್ಯೂ ಲೆವೆಲ್‌ಗೆ ಹೊಂದುವ ಹುಡುಗನಿಗಾಗಿ ಕಾಯುತ್ತಾರಂತೆ.
  • ಪ್ರತಿಯೊಬ್ಬರಿಗೂ ಸರಾಸರಿ ೩-೫ ಮಂದಿ ಬೆಸ್ಟ್ ಫ್ರೆಂಡ್ಸ್ ಮಾತ್ರ ಇರುತ್ತಾರಂತೆ.
  • ಪ್ರತೀ ಬಾರಿ ಯಾರಾದರೂ ನಿಮಗೆ ಒಂದ್ ಪ್ರಶ್ನೆ ಕೇಳ್ಲಾ? ಎಂದರೆ ಸದ್ಯದಲ್ಲೇ ನೀವು ಮಾಡಿದ ತಪ್ಪುಗಳ ಬಗ್ಗೆ ಆಲೋಚಿಸುತ್ತೀರಿ.
  • ಒಂದೇ ರೀತಿಯ ಹಾಡುಗಳನ್ನು ಕೇಳುವ ಕಪಲ್ ಮಧ್ಯೆ ಹೆಚ್ಚು ಹೊಂದಾಣಿಕೆ ಇರುತ್ತದಂತೆ.
  • ವ್ಯಂಗ್ಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ಜನರು ಬೇರೆಯವರ ಮೈಂಡ್ ರೀಡ್ ಮಾಡುತ್ತಾರಂತೆ.
  • ಯಾರಾದರೂ ಇಷ್ಟಪಟ್ಟವರು ಮೆಸೇಜ್ ಮಾಡಿದಾಗ ನಮ್ಮ ಟೈಪಿಂಗ್ ಸ್ಪೀಡ್ ಹೆಚ್ಚಾಗುತ್ತದಂತೆ.
  • ಶೇ.70ರಷ್ಟು ಮಂದಿಗೆ ಹಳೆಯ ಹಾಡುಗಳೇ ಇಷ್ಟ. ಏಕೆಂದರೆ ಅದರ ಜೊತೆ ಅವರಿಗೆ ಒಳ್ಳೆಯ ನೆನಪುಗಳು ಇರುತ್ತವೆ.
  • ಸತ್ತ ನಂತರದ ಏಳು ನಿಮಿಷ ಮೆದುಳು ಕೆಲಸ ಮಾಡುತ್ತದಂತೆ. ಈ ವೇಳೆ ನಮ್ಮ ಜೀವನವೇ ಸಿನಿಮಾ ರೀತಿ ಓಡುತ್ತದಂತೆ.
  • ಮನಷ್ಯನೊಬ್ಬ ದಿನಕ್ಕೆ ಸರಾಸರಿ ನಾಲ್ಕು ಸುಳ್ಳು ಹೇಳುತ್ತಾನಂತೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss