ಭಾರತವನ್ನು ತೆಗಳುವ ಭರದಲ್ಲಿ ಬೇರೊಬ್ಬರ ಟ್ವೀಟ್ ಕದ್ರಾ ಪಾಕ್ ಪ್ರಧಾನಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್‌ನಿಂದ ಭಾರತ ಹೊರಬಂದಿದೆ. ಇದೀಗ ಫೈನಲ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಸೆಣಸಾಡಲಿದೆ.

ಭಾರತ ತಂಡದ ಸೋಲಿನ ನಂತರ ನಾವು ಫೈನಲ್‌ನಲ್ಲಿದ್ದೇವೆ, ನೀವು ಬಂದಿಲ್ಲ ಎಂದು ಟ್ವೀಟ್ ಮಾಡುವ ಉದ್ದೇಶದಿಂದ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಈ ಭಾನುವಾರ ಇದು 152/0 VS 172/0 ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿದೆ.

ಈ ಟ್ವೀಟ್ ಅರ್ಥ ಹೀಗಿದೆ.. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಇಂಗ್ಲೆಂಡ್‌ಗೆ 169 ರನ್‌ಗಳ ಗುರಿ ನೀಡಿತ್ತು. ಉತ್ತರವಾಗಿ ಇಂಗ್ಲೆಂಡ್ ಯಾವುದೇ ವಿಕೆಟ್ ನಷ್ಟವಿಲ್ಲದೆ ಸುಲಭವಾಗಿ 170 ರನ್ ಸಾಧಿಸಿತು.

ಇನ್ನು ಪಾಕಿಸ್ತಾನ ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ಟೀಂ ಇಂಡಿಯಾ ನೀಡಿದ್ದ 152 ರನ್‌ಗಳ ಗುರಿಯನ್ನು ತಲುಪಿತ್ತು. ಪಾಕ್ ಪ್ರಧಾನಿ ಟ್ವೀಟ್‌ನ ಅರ್ಥ ಭಾನುವಾರ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ಕಾದಾಡಲಿವೆ ಎಂದು.

ಆದರೆ ಈ ಟ್ವೀಟ್ ನನ್ನದು ಎಂದು ಟ್ವೀಟುದಾರನೊಬ್ಬ ಹೇಳಿದ್ದಾನೆ. ಪ್ರಧಾನಿ ನಮ್ಮ ಟ್ವೀಟ್ ಕದ್ದಿದ್ದಾರೆ ಎಂದು ಆತ ಟ್ವೀಟ್ ಮಾಡಿದ್ದು, ಎಲ್ಲೆಡೆ ಇದು ವೈರಲ್ ಆಗಿದೆ. ಸಿನಾನ್ ಎಂಬ ಟ್ವಿಟರ್ ಬಳಕೆದಾರ ನಮ್ಮ ಟ್ವಿಟರ್ ಪ್ರಧಾನಿ ಕದ್ದಿದ್ದಾರೆ ಎಂದಿದ್ದಾರೆ.

ಪ್ರಧಾನಿ ತಮ್ಮ ಟ್ವೀಟ್ ಕೃತಿಚೌರ್ಯ ಮಾಡಿದ್ದಾರೆ ಎಂದು ಸಿನಾನ್ ಎಂಬ ಟ್ವಿಟರ್ ಬಳಕೆದಾರರು ತಮ್ಮ ಟ್ವಿಟರ್ ಖಾತೆಯಲ್ಲಿ ದಾಖಲೆ ಮೂಲಕ ಆರೋಪ ಹೋರಿಸಿದ್ದಾರೆ. ವಾಸ್ತವವಾಗಿ ಈ ಬಳಕೆದಾರ ಸಂಜೆ 4:49 ಕ್ಕೆ ಈ ಟ್ವೀಟ್ ಮಾಡಿದ್ದಾರೆ. ಆದರೆ ಪಾಕ್ ಪಿಎಂ ಇದೇ ಟ್ವೀಟ್ ಅನ್ನು ಕದ್ದು ಸಂಜೆ 4:57 ಕ್ಕೆ ಮತ್ತೊಂದು ಟ್ವೀಟ್ ಮಾಡಿದ್ದಾರೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!