ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ: ಮೋದಿ ಕಾಯ೯ಕ್ರಮ ವಿರುದ್ಧ ಕುಮಾರಸ್ವಾಮಿ ಟೀಕೆ

ಹೊಸದಿಗಂತ ವರದಿ, ಕಲಬುರಗಿ:

ಜನರ ತೆರಿಗೆ ಹಣವನ್ನು ದುಬ೯ಳಕೆ ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿಯವರ ಹುಬ್ಬಳ್ಳಿ ಕಾಯ೯ಕ್ರಮದಲ್ಲಿ ವೆಚ್ಚ ಮಾಡುತ್ತಿದ್ದು,ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಗುರುವಾರ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಫರಹತಾಬಾದ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯ ಕಾಯ೯ಕ್ರಮಕ್ಕೆ ಖಚು೯ವೆಚ್ಚ ಯಾರು ಕೊಡುತ್ತಿದ್ದಾರೆ. ನಾಡಿನ ಜನರ ತೆರಿಗೆ ಹಣವನ್ನು ಗೌರವಿಸಬೇಕು. ಚುನಾವಣಾ ಸಂದರ್ಭದಲ್ಲಿ ಸಕಾ೯ರದ ಹಣದಲ್ಲಿ ಕಾಯ೯ಕ್ರಮ ಮಾಡುತ್ತಿದ್ದು,ಮೋದಿ ಅವರೆ ತಮ್ಮ ಕಾಯ೯ಕ್ರಮಕ್ಕೆ ಯಾರು ದುಡ್ಡು ಕೊಡುತ್ತಿದ್ದಾರೆ ಎಂಬುದನ್ನು ಉತ್ತರಿಸಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದು ಎನೂ ಸಂದೇಶ ನೀಡುತ್ತಿದ್ದಾರೆ. ಕೇವಲ ಬಾಯಿಯೋ,ಬೆಹನೋ ಅಂದರೆ ಸಾಕಾ ? ಜನರ ಸಮಸ್ಯೆ ಎನಿದೆ ಎಂಬುದು ತಿಳಿಯುವುದು ಬೇಡವಾ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಈಗಾಗಲೇ ಸಾಲದ ಹೊರೆಯಲ್ಲಿದೆ.ಇದೀಗ ಈ ರೀತಿಯಾಗಿ ಕಾಯ೯ಕ್ರಮ ಮಾಡಿ,ಸಾಲದ ಹೊರೆಯನ್ನು ಇನ್ನಷ್ಟು ಹೆಚ್ಚು ಮಾಡುತ್ತಿದ್ದು,ಈ ಬಾರಿ ಜನರು ನಿಮಗೆ ತಿರಸ್ಕಾರ ಮಾಡುವುದು ಗ್ಯಾರಂಟಿ ಎಂದರು.

ಕಾಂಗ್ರೆಸ್ ಪಕ್ಷ 200 ಯೂನಿಟ್ ವಿದ್ಯುತ್ ಉಚಿತ ಘೋಷಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,200 ಯೂನಿಟ,ಗೆ ಎಂಟು ನೂರು ರೂಪಾಯಿ ವಿನಾಯತಿ ಸಿಗುತ್ತದೆ. ಅದೇನು ದೊಡ್ಡ ಕಾಯ೯ಕ್ರಮವಲ್ಲ.ನಮ್ಮ ಪಂಚರತ್ನ ಯೋಜನೆಗೆ ಅದು ಸರಿಸಾಟಿಯೇ ಇಲ್ಲ.ಜೆಡಿಎಸ್ ಪಕ್ಷದ ಕಾಯ೯ಕ್ರಮಗಳನ್ನು ಕಾಂಗ್ರೆಸ್ ಹೈಜಾಕ್ ಮಾಡುತ್ತಿದೆ ಎಂದರು.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಿನ್ನೆ ಪೊರಕೆ ಹಿಡಿದು ಕಸ ಗುಡಿಸಿದ್ದು ಕೂಡ ಕಾಂಗ್ರೆಸ್ ಪಕ್ಷಕ್ಕೆ ಸ್ವಂತಿಕೆಯಲ್ಲ.ಕಸವಿಲ್ಲದ ರಸ್ತೆಯಲ್ಲಿ ಪೊರಕೆ ಹಿಡಿದು ನಿಂತಿದ್ದಾರೆ ಎಂದು ವ್ಯಂಗ್ಯವಾಡಿದ ಅವರು,ಸಕಾ೯ರದಲ್ಲಿದ್ದಾಗ ಎಷ್ಟು ಹಣ ಲೂಟಿ ಮಾಡಿದ್ದಾರೆ. ಇದೀಗ ಭ್ರಷ್ಟಾಚಾರ ಸ್ವಚ್ಛ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!