Wednesday, July 6, 2022

Latest Posts

ಸೋಮೇಶ್ವರ ದೇಗುಲದ ಒತ್ತುವರಿ ತೆರವಿಗೆ ಹೈಕೋರ್ಟ್‌ನಲ್ಲಿ ಅರ್ಜಿ: ಓಂಶಕ್ತಿ ಚಲಪತಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಕೋಲಾರ: 

ನಗರದ ಇತಿಹಾಸ ಪ್ರಸಿದ್ದ ಸೋಮೇಶ್ವರ ದೇವಾಲಯ, ಪಕ್ಕದ ಕಲ್ಯಾಣಿ ಸ್ವಚ್ಛತೆ ಕಾಪಾಡಲು ಹಾಗೂ ಒತ್ತುವರಿ ತೆರವಿಗೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ಕೋಲಾರ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು.
ಸೋಮೇಶ್ವರ ದೇಗುಲದ ಕಲ್ಯಾಣಿಗೆ ಅನ್ಯಕೋಮಿನ ಕೆಲವರು ಕಸ ಹಾಕಿ ಸ್ವಚ್ಛತೆಗೆ ಧಕ್ಕೆ ತರುತ್ತಿರುವ ಕುರಿತು ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಬಿಟ್ಟದ್ದನ್ನು ಗಮನಿಸಿ ಇಂದು ಅವರು ಸ್ಥಳ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು.
ಇದು ಮುಜರಾಯಿ ದೇವಾಲಯ ಮಾತ್ರವಲ್ಲ, ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಗೆ ಸೇರಿದೆ, ಈ ಎರಡೂ ಇಲಾಖೆಗಳ ಸಮನ್ವಯತೆಯನ್ನು ಕಾಪಾಡಿಕೊಂಡು ದೇವಾಲಯದ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಾಜಿ ನಗರಸಭಾ ಸದಸ್ಯ ವಿನೋದ್ ಎಂಬುವವರು ಕೆಲವು ಅನ್ಯಕೋಮಿನ ಯುವಕರು ಕಲ್ಯಾಣಿಯ ಸ್ವಚ್ಚತೆಗೆ ಧಕ್ಕೆ ತರುತ್ತಿದ್ದ ಪೋಟೋ ಹಾಕಿದ್ದು, ಅದನ್ನು ಗಮನಿಸಿ ಭೇಟಿ ನೀಡಿದ್ದಾಗಿ ತಿಳಿಸಿದ ಅವರು, ಇದು ಹಿಂದೂಗಳ ಶ್ರದ್ಧಾಕೇಂದ್ರವಾಗಿದ್ದು, ಇದರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಸಂಸದರ ಗಮನಕ್ಕೆ ತರುವುದಾಗಿ ತಿಳಿಸಿದರು.
ವಿಷಯ ತಿಳಿದೊಡನೇ ಡಿಸಿಯವರ ಗಮನಕ್ಕೆ ತಂದಿದ್ದು, ಮುಜರಾಯಿ ತಹಸೀಲ್ದಾರ್ ನಾಗವೇಣಿ ಅವರು ಕೂಡಲೇ ಸ್ಪಂದಿಸಿ ಕಲ್ಯಾಣಿಗೆ ಹಾಕಿದ್ದ ಕಬ್ಬಿಣದ ಕಾಂಪೌಡ್ ಹಾಳಾಗಿದ್ದು, ಅದನ್ನು ಸರಿಪಡಿಸಲು ಕ್ರಮ ಕೈಗೊಂಡಿದ್ದಾರೆ, ಜತೆಗೆ ಸ್ವಚ್ಚತೆಗೂ ಸೂಚಿಸಿದ್ದಾರೆ ಎಂದು ತಿಳಿಸಿದರು.
ಕಳೆದ 20 ವರ್ಷಗಳ ಹಿಂದೆ ಹೋರಾಟ ನಡೆಸಿ ಕಲ್ಯಾಣಿ ಜಾಗ ಒತ್ತುವರಿ ತೆರವುಗೊಳಿಸಿ ಕಲ್ಯಾಣಿಗೆ ಪೆನ್ಸಿಂಗ್ ಹಾಕಿಸಿದ್ದಾಗಿ ತಿಳಿಸಿದ ಅವರು, ಪುರಾತತ್ವ ಇಲಾಖೆ ನಿಯಮಗಳ ಪ್ರಕಾರ ದೇವಾಲಯದ ಸುತ್ತ ಕನಿಷ್ಟ 100 ಮೀಟರ್ ನಿವಾಸಗಳು, ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶವಿಲ್ಲ, ಈ ಸಂಬಂಧ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.
ನಮ್ಮ ಶ್ರದ್ಧಾಕೇಂದ್ರದ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು, ಕಲ್ಯಾಣಿಯಲ್ಲಿ ಕಸ ಹಾಕುವುದಕ್ಕೆ ತಡೆಯೊಡ್ಡಬೇಕು ಎಂದು ಆಗ್ರಹಿಸಿದ ಅವರು, ಇತಿಹಾಸ ಪ್ರಸಿದ್ದ ಈ ಪುರಾತನ ದೇವಾಲಯ ಸಂರಕ್ಷಣೆಗೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಿನೋದ್, ನಾಮಾಲು ಮಂಜು, ಕೋಟೆ ರಾಧಾಕೃಷ್ಣ, ದೇವಾಲಯ ಸಮಿತಿಯ ಸದಸ್ಯರು, ಮುಜರಾಯಿ ಇಲಾಖೆ ಸಿಬ್ಬಂದಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss