ಅಪ್ಪನ ಕುರ್ಚಿಯೇರಿದ ಮಗ: ವಿಪಕ್ಷಗಳ ಬಾಯಿಗೆ ಆಹಾರವಾದ ‘ಮಹಾ’ ಸಿಎಂ ಪುತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ, ಲೋಕಸಭಾ ಸದಸ್ಯ ಶ್ರೀಕಾಂತ್ ಶಿಂಧೆ ಅವರು ಮುಖ್ಯಮಂತ್ರಿಯ ಕುರ್ಚಿಯ ಮೇಲೆ ಕುಳಿತು ಮಾತುಕತೆ ನಡೆಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದ್ದು, ಎಲ್ಲೆಡೆ ಟೀಕೆ ವ್ಯಕ್ತವಾಗುತ್ತಿದೆ.

ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಫೋಟೋದ ಮುಂದೆ ಶ್ರೀಕಾಂತ್ ಅವರು, ಕುರ್ಚಿಯ ಮೇಲೆ ಕುಳಿತಿರುವ ಚಿತ್ರವನ್ನು ಎನ್‌ಸಿಪಿ ವಕ್ತಾರ ರವಿಕಾಂತ್ ವರ್ಪೆ ಟ್ವೀಟ್ ಮೂಲಕ ಶೇರ್​ ಮಾಡಿದ್ದಾರೆ. ಫೋಟೋ ಕೆಳಗೆ ಇರಿಸಲಾಗಿರುವ ಬೋರ್ಡ್ ಮತ್ತು ಕುರ್ಚಿಯ ಹಿಂದೆ ‘ಮಹಾರಾಷ್ಟ್ರ ಸರ್ಕಾರ-ಮುಖ್ಯಮಂತ್ರಿ’ ಎಂದು ಬರೆಯಲಾಗಿದೆ. ಅವರನ್ನು ಸೂಪರ್ ಸಿಎಂ ಎಂದು ಕರೆದ ಎನ್‌ಸಿಪಿ ನಾಯಕ ಕರೆದಿದ್ದಾರೆ. ಇದು ಯಾವ ರೀತಿಯ ರಾಜಧರ್ಮ? ಎಂದು ಪ್ರಶ್ನಿಸಿದ್ದಾರೆ.

 

ಈ ಫೋಟೋ ಭಾರಿ ವೈರಲ್​ ಆಗುತ್ತಲೇ ಶ್ರೀಕಾಂತ್​ ಶಿಂಧೆ ಸ್ಪಷ್ಟನೆ ಕೊಟ್ಟಿದ್ದು, ‘ನಾನು ಎರಡು ಅವಧಿಯ ಸಂಸದರಾಗಿದ್ದು, ಶಿಷ್ಟಾಚಾರದ ಬಗ್ಗೆ ಅರಿವಿದೆ. ಇದು ನಮ್ಮ ಮನೆಯಲ್ಲಿ ತೆಗೆದ ಚಿತ್ರ, ತಂದೆಗೆ ಕಚೇರಿಯಲ್ಲಿ ನೀಡಿದ ಅಧಿಕೃತ ಸಿಎಂ ಕುರ್ಚಿ ಮೇಲೆ ನಾನು ಕುಳಿತಿಲ್ಲ. ಇದು ಮುಖ್ಯಮಂತ್ರಿಯ ಅಧಿಕೃತ ನಿವಾಸವೂ ಅಲ್ಲ. ಥಾಣೆಯಲ್ಲಿರುವ ಖಾಸಗಿ ನಿವಾಸ ಹಾಗೂ ಕಚೇರಿ ಇದು’ ಎಂದಿದ್ದಾರೆ.

ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಈ ಬಗ್ಗೆ ಟ್ವೀಟ್ ಮಾಡಿ, ‘ಅಪ್ಪನ ಮಗನಿಗೆ ಅಧಿಕಾರ ಇರಲಿ, ಬಿಡಲಿ, ಅಪ್ಪನ ಎಲ್ಲಾ ಕರ್ತವ್ಯಗಳನ್ನು ಇವರೇ ನಿಭಾಯಿಸುವಂತಿದೆ’ ಎಂದು ವ್ಯಂಗ್ಯವಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!