ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸ ದಿಗಂತ ವರದಿ, ಜಮಖಂಡಿ:
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತುಂಗಳ ಗ್ರಾಮದಲ್ಲಿ ತನ್ನ ಮಗನೊಂದಿಗೆ ಸೇರಿಕೊಂಡು ಗಂಡ ಹೆಂಡತಿಯನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ತುಂಗಳ ಗ್ರಾಮದಲ್ಲಿ ರಾತ್ರಿ ನಿದ್ದೆ ಮಾಡುವ ಸಮಯದಲ್ಲಿ ಮಹಿಳೆಯನ್ನು ಅನುಮಾನಾಸ್ಪದವಾಗಿ ದಿ.7 ರಂದು ಸಾವನ್ನಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದ ಬಂದಿದೆ.
ಘಟನೆ;- ಗ್ರಾಮದ ಹನುಮಂತ ಗೋವಿಂದಪ್ಪ ವಡ್ರಾಳ (45) ಈತನ ಅಪ್ರಾಪ್ತ ಮಗ ಸೇರಿಕೊಂಡು ದಿ.6 ರಂದು ರಾತ್ರಿ ಮನೆಯಲ್ಲಿ ಮಹಾದೇವಿ ಮಲಗಿದ ಸಮಯದಲ್ಲಿ ಅನೈತಿಕ ಸಂಬಂಧ ಶಂಕಿಶಿ ಮಹಾದೇವಿಯನ್ನು ಕೊಲೆ ಮಾಡಿದ್ದಾರೆ.
ಜೂ.06ರ ರಾತ್ರಿವೇಳೆಯಲ್ಲಿ ತಮ್ಮ ಜಮೀನಿನಲ್ಲಿರುವ ಮನೆಯಲ್ಲಿ ಕೊಲೆ ಮಾಡಿ ಜೂ.7 ರಂದು ತಮ್ಮ ಜಮೀನಿನಲ್ಲಿ ಸಾಕ್ಷಿ ಪುರಾವೆ ಸಿಗದಂತೆ ನಾಶಮಾಡಿ ಮಹಿಳೆಯ ದೇಹವನ್ನು ಸುಟ್ಟು ಹಾಕಲಾಗಿದೆ ಎಂದು ತಿಳಿದು ಬಂದಿದೆ.ಬಗ್ಗೆ ಬಂಧಿತ ಆರೋಪಿಗಳು ತಪ್ಪೋಪಿಗೆ ನೀಡಿದ್ದಾರೆ.
ಈ ಪ್ರಕರಣ ಸಂಭವಿಸಿದಂತೆ ಮಾಹಿತಿ ಕಲೆಹಾಕಲು ಗುರುವಾರ ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಡಿವೈಎಸ್ಪಿ ಎಂ.ಪಾಂಡುರಂಗಯ್ಯಾ, ಸಿಪಿಐ ಆಯ್.ಎಂ. ಮಠಪತಿ, ಪಿಎಸ್ಐ ಬಿ.ಸಿ.ಮಗದುಮ, ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.