ಮಹಾರಾಷ್ಟ್ರ ಸರ್ಕಾರದ ವಿರುದ್ಧ ಹಾಡು: Rapper ವಿರುದ್ಧ ಎಫ್‌ಐಆರ್ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮಹಾರಾಷ್ಟ್ರ ಸರ್ಕಾರ ಹಾಗೂ ವ್ಯವಸ್ಥೆಯ ವಿರುದ್ಧ ಹಾಡು ಬರೆದ ರ್ಯಾಪರ್ (Rapper) ವಿರುದ್ಧ ಮುಂಬೈನಲ್ಲಿ (Mumbai Police) ಕೇಸ್ ದಾಖಲಿಸಲಾಗಿದೆ.

ಇದು ಒಂದೇ ವಾರದಲ್ಲಿ ಇದು ಎರಡನೇ ಪ್ರಕರಣವಾಗಿದೆ.

ಈಗಿನ ಪ್ರಕರಣದಲ್ಲಿ ಮುಂಬೈ ಪೊಲೀಸ್ ಕ್ರೈಮ್ ಬೇಹುಗಾರಿಕಾ ಘಟಕದ ಪೊಲೀಸ್ ಅಧಿಕಾರಿಗಳು ದೂರು ನೀಡಿದ್ದಾರೆ. ರ್ಯಾಪರ್ ಉಮೇಶ್ ಖಾಡೆ ವಿರುದ್ಧ ಶುಕ್ರವಾರ ಎಫ್‌ಐಆರ್ ದಾಖಲಾಗಿದೆ. ಈ ರ್ಯಾಪರ್ ಮುಂಬೈನ ವಾಡಲಾ ಪ್ರದೇಶದಲ್ಲಿ ವಾಸವಾಗಿದ್ದಾರೆ. ಉಮೇಶ್ ಅವರು, ಬೋಂಗ್ಲಿ ಕೇಲಿ ಜನತಾ(ಬಳಲಿದ ಮುಖದ ಜನರು) ಎಂಬ ರ್ಯಾಪ್ ಸಾಂಗ್ ಬರೆದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 504, 505(2) ಹಾಗೂ 2000 ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅನ್ವಯ ಉಮೇಶ್ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!