Tuesday, June 28, 2022

Latest Posts

ಬಿಪಿನ್ ರಾವತ್ ನಿಧನ: ಜನ್ಮದಿನ ಆಚರಿಸಿಕೊಳ್ಳದಿರಲು ಸೋನಿಯಾ ಗಾಂಧಿ ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ಕುನ್ನೂರ್‌ನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಪತನದಲ್ಲಿ ಸಿಡಿಎಸ್ ಬಿಪಿನ್ ರಾವತ್ ಮತ್ತು ಇತರ 11 ಸೈನಿಕರು ಮೃತಪಟ್ಟ ಹಿನ್ನೆಲೆ ಇಂದು ಸೋನಿಯಾ ಗಾಂಧಿ ತಮ್ಮ ಜನ್ಮದಿನ ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ.
ರಾಷ್ಟ್ರಾದ್ಯಂತ ಯಾವುದೇ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಜನ್ಮದಿನವನ್ನು ಸಂಭ್ರಮಿಸಬಾರದು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಲೋಕಸಭಾ ಸಂಸದರಾದ ಮಾಣಿಕ್ಕಮ್ ಟಾಗೋರ್ ಮಾಹಿತಿ ನೀಡಿದ್ದು, ಸೋನಿಯಾ ಗಾಂಧಿ ಅವರು ಸಂಭ್ರಮಾಚರಣೆ ಬೇಡ ಎಂದಿದ್ದಾರೆ. ಎಲ್ಲಿಯೂ ಯಾವುದೇ ರೀತಿ ಸಂಭ್ರಮಾಚರಣೆ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಡಿ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss