ಗರ್ಲ್‌ಫ್ರೆಂಡ್‌ ತಂಟೆಗೆ ಬಂದ ಸೋನು ನಾಮಿನೇಟ್‌ ಮಾಡಿ ಸೇಡು ತೀರಿಸಿಕೊಂಡ ಜಸ್ವಂತ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್
‌ಬಿಗ್‌ ಬಾಸ್‌ ಒಟಿಟಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಬಿಗ್ ಬಾಸ್ ಮನೆಯಲ್ಲಿ ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಈ ವಾರ ಮತ್ತೊಬ್ಬ ಸದಸ್ಯ ಬಿಗ್ ಬಾಸ್ ಮನೆಯಿಂದ ಹೊರ ಹೋಗಲಿದ್ದಾರೆ. ಅದು ಯಾರೆಂದು ಈ ವಾರಾಂತ್ಯದಲ್ಲಿ ತಿಳಿಯಲಿದೆ. ಕಳೆದ ವಾರದಂತೆ ಈ ವಾರವೂ ಸೋನು ಗೌಡ ನಾಮಿನೇಟ್ ಆಗಿದ್ದಾರೆ. ಇದಕ್ಕೆ ಜಶ್ವಂತ್ ಕಾರಣರಾಗಿದ್ದಾರೆ. ತನ್ನ ಗರ್ಲ್‌ ಫ್ರೆಂಡ್‌ ತಂಟೆಗೆ ಬಂದ ಸೋನು ಶ್ರೀನಿವಾಸ್‌ ಗೌಡರನ್ನು ನಾಮಿನೇಟ್‌ ಮಾಡುವ ಮೂಲಕ ಜಸ್ವಂತ್ ಸೇಡು ತೀರಿಸಿಕೊಂಡಿದ್ದಾರೆ.
ಬಿಗ್ ಬಾಸ್ ಎರಡನೇ ವಾರದ ಮೊದಲ ದಿನ ನಾಮಿನೇಷನ್ ಪ್ರಕ್ರಿಯೆಗೆ ಮುನ್ನ ಮ್ಯೂಸಿಕಲ್‌ ಚೇರ್ ನಂತಹ ಆಟವನ್ನು ಆಡಿಸಲಾಗಿದೆ. ಈ ಆಟದಲ್ಲಿ ಸೋನುಗೆ ಒಂದು ಪತ್ರ ಸಿಕ್ಕಿತು. ಆ ಪತ್ರದ ಮೂಲಕ ಆಕೆ ಒಬ್ಬ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಬೇಕು. ಆಗ ಸೋನು ನಂದು ಅವರನ್ನು ನಾಮಿನೇಟ್‌ ಮಾಡಿದ್ದಾರೆ. ಜೊತೆಗೆ ಇದಕ್ಕೆ ಸೋನು ಕಾರಣವನ್ನೂ ನೀಡಿದ್ದಾರೆ. ನಂದು ಅವರು ಕಷ್ಟಪಟ್ಟು ಆಡುತ್ತಾರೆ. ನನಗೆ ಅವರ ಕಠಿಣ ಪ್ರತಿಸ್ಪರ್ಧಿಯಂತೆ ಅನಿಸುತ್ತಾರೆ. ಈ ಕಾರಣಕ್ಕಾಗಿ ನಾನು ಅವರ ಹೆಸರನ್ನು ತೆಗೆದುಕೊಂಡಿದ್ದೇನೆ ಎಂದು ಸೋನು ಹೇಳಿದ್ದಾರೆ.
ನಂತರ ಆಟ ಸಾಗಿದಂತೆ ಮತ್ತೊಂದು ಗೇಮ್ ಗೆದ್ದ ಜಶ್ವಂತ್  ಸೋನುರನ್ನು ನಾಮಿನೇಟ್ ಮಾಡಿದ್ದಾರೆ. ‘ಸೋನು ಎಲ್ಲರೊಂದಿಗೆ ಬೆರೆಯುತ್ತಿಲ್ಲ. ಜೊತೆಗೆ ಆವಳು ನನ್ನ ಗೆಳತಿಯನ್ನು ನಾಮಿನೇಟ್ ಮಾಡಿದ್ದಾಳೆ. ಈ ಕಾರಣಕ್ಕಾಗಿ ಅವಳನ್ನು ನಾಮಿನೇಟ್ ಮಾಡುತ್ತಿದ್ದೇನೆʼ ಎಂದು ಹೇಳಿದ ಜಸ್ವಂತ್‌ ಈ ಮೂಲಕ ಸೇಡು ತೀರಿಸಿಕೊಂಡರು.
ಕಳೆದ ವಾರವೇ ಸೋನು ನಾಮಿನೇಟ್ ಆಗಿದ್ದರು. ಮೊದಲ ವಾರದಲ್ಲೇ ಮನೆಯಿಂದ ಹೊರ ಬರುತ್ತಾರೆ ಎಂಬುದು ಎಲ್ಲರ ಊಹೆಯಾಗಿತ್ತು. ಆದರೆ, ಹೆಚ್ಚು ಮತ ಪಡೆದು ಬಚಾವ್ ಆದರು. ಈಗ ಮತ್ತೊಮ್ಮೆ ನಾಮಿನೇಟ್ ಆಗಿದ್ದಾರೆ. ಈ ಬಾರಿಯೂ ವಿಕ್ಷಕರ ಶ್ರೀರಕ್ಷೆಯಿಂದ ಎಲಿಮಿನೇಷನ್ ನಿಂದ ಪಾರಾಗುತ್ತಾರೋ ಕಾದು ನೋಡಬೇಕಿದೆ. ಸೋನು ಹೊರತುಪಡಿಸಿ, ನಂದು, ಅಕ್ಷತಾ, ಶಿರ್ಷಾ ಗೌಡ, ಸನ್ಯಾ ಅಯ್ಯರ್, ಜಯಶ್ರೀ, ಸೋಮಣ್ಣ, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ ಅವರು ಈ ವಾರ ನಾಮಿನೇಟ್‌ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!