Wednesday, August 10, 2022

Latest Posts

ಐಟಿ ದಾಳಿ ಬಳಿಕ ಮೊದಲ ಬಾರಿಗೆ ಮೌನ ಮುರಿದ ಬಾಲಿವುಡ್ ನಟ ಸೋನು ಸೂದ್: ಹೇಳಿದ್ದೇನು ಗೊತ್ತಾ?

ಹೊಸದಿಗಂತ ಆನ್ ಲೈನ್ ಡೆಸ್ಕ್:

20 ಕೋಟಿ ರೂ. ತೆರಿಗೆ ವಂಚನೆ ಆರೋಪ ಕೇಳಿ ಬಂದ ನಂತರ ಮೊದಲ ಬಾರಿಗೆ ಬಾಲಿವುಡ್ ನಟ ಸೋನು ಸೂದ್ ಮೌನ ಮುರಿದಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಅವರು, ‘ನಿಮ್ಮ ಪರವಾದ ಕಥೆಯನ್ನು ಯಾವಾಗಲೂ ನೀವೆ ಹೇಳಬೇಕೆಂದಿಲ್ಲ. ಬದಲಿಗೆ ಸಮಯವೇ ತಿಳಿಸುತ್ತದೆ’ ಎಂದಿದ್ದಾರೆ.ದೇಶದ ಜನರ ಸೇವೆ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದೇನೆ. ನನ್ನ ಫೌಂಡೇಷನ್​ನಲ್ಲಿ ಇರುವ ಒಂದೊಂದು ರೂಪಾಯಿ ಕೂಡ ಅಗತ್ಯ ಇರುವವರಿಗೆ ಸಹಾಯ ಮಾಡಲು ಮತ್ತು ಜನರ ಜೀವ ಉಳಿಸಲು ಕಾದಿದೆ.
ನನ್ನ ಜಾಹೀರಾತಿನಿಂದ ನನಗೆ ಬರುವ ಸಂಭಾವನೆಯನ್ನು ನೇರವಾಗಿ ಮಾನವೀಯ ಕೆಲಸಗಳಿಗೆ ನೀಡಲು ತಿಳಿಸಿದ್ದೇನೆ. ಕಳೆದ ನಾಲ್ಕು ದಿನಗಳಿಂದ ಬ್ಯುಜಿಯಾಗಿದ್ದೆ, ಹಾಗಾಗಿ ನಿಮ್ಮ ನಿಮ್ಮ ಕರೆಗಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಈಗ ನಿಮ್ಮ ಸೇವೆಗಾಗಿ ಮರಳಿದ್ದೇನೆ. ನನ್ನ ಪಯಣ ಹೀಗೆ ಮುಂದುವರಿಯಲಿದೆ. ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.

ಸೋನು ಸೂದ್ ರ ಮುಂಬೈ, ಲಖನೌ, ಕಾನ್ಪುರ, ಜೈಪುರ, ದೆಹಲಿ, ಗುರುಗ್ರಾಮ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಈ ವೇಳೆ ಅಕ್ರಮ ವಿದೇಶಿ ಹಣ ಸಂಗ್ರಹ ಹಾಗೂ ತೆರಿಗೆ ವಂಚನೆ ಮಾಡಿರುವ ಬಗ್ಗೆ ಅಧಿಕಾರಿಗಳು ಆರೋಪಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss