Thursday, August 11, 2022

Latest Posts

ಸಿನಿಮಾದಲ್ಲಿ ‘ಹೀರೋ’ ಸೋನು ಸೂದ್ ಗೆ ಹೊಡೆದರೆಂಬ ಕಾರಣಕ್ಕೆ ಮನೆಯ ಟಿವಿಯನ್ನೇ ಕುಟ್ಟಿ ಪುಡಿ ಮಾಡಿದ ಬಾಲಕ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………….

ಹೊಸದಿಗಂತ ಆನ್ ಲೈನ್ ಡೆಸ್ಕ್:

‘ಹೀರೋ’ ಸೋನು ಸೂದ್ ಖಳನಟನಾಗಿ ನಟಿಸಿದ್ದ ‘ದೂಕುಡು’ ಸಿನಿಮಾ ನೋಡುತ್ತಿದ್ದ ಬಾಲಕನೊಬ್ಬ ಅದರಲ್ಲಿಯ ಸೋನು ಸೂದ್ ಅವರಿಗೆ ಹೊಡೆದರೆಂಬ ಕಾರಣಕ್ಕೆ ಸಿಟ್ಟಿನಿಂದ ಮನೆಯ ಟಿವಿಯನ್ನು ಕುಟ್ಟಿ ಪುಡಿ ಮಾಡಿದ್ದಾನೆ.
ಹೌದು,ಸೋನು ಸೂದ್ ಎಂದರೆ ಇಂದು ಎಲ್ಲರಿಗು ನಿಜವಾದ ಹೀರೋ. ಆದರೆ ಸಿನಿಮಾ ರಂಗದಲ್ಲಿ ಡೊನು ಸೂದ್ ಹೆಚ್ಚಾಗಿ ಖಳನಟನಾಗಿ ಬಣ್ಣ ಹಚ್ಚಿದ್ದಾರೆ.
ಕಳೆದೊಂದು ವರ್ಷಗಳಿಂದ ಸೋನು ಸೂದ್‌ ಮನೆ ಮಾತಾಗಿರುವ ನಟ. ಕೊರೋನಾ ಸಮಯದಲ್ಲಿ ಅವರು ಮಾಡಿದ ಸೇವೆ ಇಂದ ಇಂದು ಅವರು ಎಲ್ಲರಿಗು ಹೀರೋ . ಆದರೆ ಇಲ್ಲಿ ಒಬ್ಬ ಬಾಲಕ ಅವರ ಹಳೆ ಸಿನಿಮಾ ನೋಡಿ, ಅವರಿಗೆ ಹೊಡೆದರು ಎಂಬ ಕಾರಣಕ್ಕೆ ಆಕ್ರೋಶ ಹೊರಹಾಕಿದ್ದಾನೆ.
ಸಂಗರೆಡ್ಡಿ ಊರಿನ ಏಳು ವರ್ಷದ ಬಾಲಕ ವಿರಾಟ್‌ ಇಂಥದ್ದೊಂದು ಕೃತ್ಯ ಮಾಡಿದ್ದಾನೆ. ಸೋನು ಸೂದ್‌ ಹಲವರಿಗೆ ಸಹಾಯ ಮಾಡುತ್ತಿದ್ದುದನ್ನು ಟೀವಿಯಲ್ಲಿ ನೋಡುತ್ತಿದ್ದ ಬಾಲಕನಿಗೆ ಈ ನಟನ ಬಗ್ಗೆ ಅಭಿಮಾನ ಉಕ್ಕಿಹರಿದಿದೆ. ಆದರೆ ಸಿನಿಮಾದಲ್ಲಿ ಅವರನ್ನು ಹೊಡೆಯುವುದನ್ನು ನೋಡಲು ಬಾಲಕನಿಗೆ ಆಗಲಿಲ್ಲ. ಸಿಟ್ಟು ಹೇಗೆ ತೀರಿಸಿಕೊಳ್ಳುವುದು ತಿಳಿಯದ ಬಾಲಕ ಟೀವಿಯನ್ನೇ ಒಡೆದಿದ್ದಾನೆ.
ಈತ ಮಾಡಿರುವ ವಿಷಯ ಸುದ್ದಿಯಾಗುತ್ತಿದ್ದಂತೆಯೇ ವಿಷಯ ಸೋನು ಸೂದ್‌ ಕಿವಿಗೂ ಬಿದ್ದಿದೆ. ವಿರಾಟ್ ಟಿವಿ ಪುಡಿ ಮಾಡಿದ ವಿಡಿಯೋವನ್ನು ಸೋನು ಸೂದ್ ಟ್ವೀಟ್‍ನಲ್ಲಿ ಹಂಚಿಕೊಂಡು, ಅರೆ, ಟಿವಿ ಪುಡಿ ಮಾಡಿಬಿಟ್ಯಾ। ನಿಮ್ಮ ತಂದೆ ನನಗೆ ಹೊಸ ಟಿವಿಯನ್ನು ತಂದು ಕೊಡಲು ಹೇಳಿದರೆ ಏನು ಮಾಡಲಿ ಎಂದು ಚಟಾಕಿ ಹಾರಿಸಿದ್ದು, ಇದೀಗ ವೈರಲ್‌ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss