Thursday, August 18, 2022

Latest Posts

‘ನಿನ್ನ ಮಾರ್ಗದರ್ಶನದಲ್ಲಿ ಉತ್ತಮ ಕೆಲಸ ಮಾಡುತ್ತೇನೆ ಅಮ್ಮಾ…’

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಸಮಾಜಸೇವಕ, ನಟ ಸೋನು ಸೂದ್ ಸಾಮಾಜಿಕ ಜಾಲತಾಣದಲ್ಲಿ ಭಾವುಕವಾದ ಪೋಸ್ಟ್ ಒಂದನ್ನು ಮಾಡಿದ್ದಾರೆ.
ಇಂದು ಸೋನು ಸೂದ್ ಅವರ ತಾಯಿ ಸರೋಜ್ ಸೂದ್ ಜನ್ಮದಿನ.
ಭಾವನಾತ್ಮಕವಾಗಿ ತಾಯಿಗೆ ಸೋನು ವಿಶ್ ಮಾಡಿದ್ದು ಹೀಗೆ… ‘ಹುಟ್ಟುಹಬ್ಬದ ಶುಭಾಶಯಗಳು ಅಮ್ಮ. ಪ್ರತಿ ವರ್ಷವೂ ನಿನ್ನನ್ನು ತಬ್ಬಿಕೊಂಡು ನೇರವಾಗಿ ವಿಶ್ ಮಾಡಬೇಕು ಎನಿಸುತ್ತದೆ. ಬದುಕಿನ ಪಾಠ ಕಲಿಸಿದ ನಿನಗೆ ಧನ್ಯವಾದಗಳು. ನಿನ್ನ ಮಾತಿನಂತೆ ಒಳ್ಳೆಯ ಕೆಲಸವನ್ನೇ ಮಾಡುತ್ತೇನೆ. ಪ್ರಾಮಾಣಿಕವಾಗಿ ಇರುತ್ತೇನೆ. ಒಂದು ಮೆಸೇಜ್‌ನಲ್ಲಿ ನಿನ್ನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ. ನೀನಿಲ್ಲದೆ ಬದುಕು ಖಾಲಿಯಾಗಿದೆ. ನೀವು ಎಲ್ಲೇ ಇದ್ದರೂ ಖುಷಿಯಾಗಿರಿ. ನನಗೆ ಮಾರ್ಗದರ್ಶನ ನೀಡುತ್ತಿರಿ’ ಎಂದಿದ್ದಾರೆ.
ಸೋನು ಸೂದ್ ಮಾಡಿರುವ ವಿಶ್ ನೋಡಿದ ಅಭಿಮಾನಿಗಳು ಭಾವುಕರಾಗಿ, ಸೋನುಗೆ ಸಮಾಧಾನ ಹೇಳಿದ್ದಾರೆ.

https://www.instagram.com/p/CRkuywMgmcm/?utm_source=ig_embed&ig_rid=ed15ddfb-1860-40db-8a3f-b24df83f0841

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!