ಚಲಿಸುತ್ತಿದ್ದ ರೈಲಿನ ಬಾಗಿಲಲ್ಲಿ ಕುಳಿತ ಸೋನು ಸೂದ್: ಅಧಿಕಾರಿಗಳಿಂದ ಕ್ಲಾಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಲಿವುಡ್ ನಟ ಸೋನು ಸೂದ್ ಸಿನಿಮಾ ಕ್ಕಿಂತ ಹೆಚ್ಚಾಗಿ ಸಾಮಾಜಿಕ ಕಾರ್ಯಗಳ ಮೂಲಕ ಅನೇಕ ಅಭಿಮಾನಿಗಳ ಮನಗೆದ್ದಿದ್ದಾರೆ.ಆದ್ರೆ ಈಗ ತಾವು ಮಾಡಿದ ತಪ್ಪಿನಿಂದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಸೋನು, ರೈಲಿನಲ್ಲಿ ಪ್ರಯಾಣ ಮಾಡಿರುವ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಅವರು ಅಪಾಯಕಾರಿ ಸ್ಥಳದಲ್ಲಿ ಕೂತು ವೀಡಿಯೋ ಮಾಡಿದ್ದಾರೆ.
ರೈಲು ಜೋರಾಗಿ ಚಲಿಸುತ್ತಿರುವಾಗ ತುದಿಗಾಲಿನಲ್ಲಿ ಕುಳಿತು ಅವರು ವೀಡಿಯೋಗೆ ಪೋಸ್ ನೀಡಿದ್ದಾರೆ.ನಟನ ನಡೆಗೆ ಮುಂಬೈ ರೈಲ್ವೆ ಅಧಿಕಾರಿಗಳು ಎಚ್ಚರಿಕೆ ಕೊಟ್ಟಿದ್ದಾರೆ.

ಅನೇಕರು ಬುದ್ಧಿ ಮಾತು ಹೇಳಿದ್ದಾರೆ. ಇದು ನಿಜಕ್ಕೂ ಬೇಜವಾಬ್ದಾರಿಯುತ ನಡವಳಿಕೆ. ಈ ರೀತಿ ಪ್ರಯಾಣ ಮಾಡುವುದು ಸುರಕ್ಷಿತವಲ್ಲ, ಅಭಿಮಾನಿಗಳಿಗೆ ಮಾದರಿ ಆಗಿರುವ ನೀವು ಈ ರೀತಿ ನಡೆದುಕೊಳ್ಳಬಾರದು ಎಂದು ಕೂಡ ಜನರು ಕಾಮೆಂಟ್ ಮಾಡಿದ್ದಾರೆ.

ಮುಂಬೈ ರೈಲ್ವೆ ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೂ ಈ ಬಗ್ಗೆ ಪ್ರತಿಕ್ರಿಯೆ ನೀಡಲಾಗಿದೆ. ಈ ರೀತಿ ಪ್ರಯಾಣ ಮಾಡುವುದು ಸಿನಿಮಾಗಳಲ್ಲಿ ಮನರಂಜನೆ ನೀಡಬಹುದು. ಆದರೆ ನಿಜ ಜೀವನದಲ್ಲಿ ಅಲ್ಲ. ಎಲ್ಲ ಸುರಕ್ಷತಾ ಕ್ರಮಗಳನ್ನು ಪಾಲಿಸೋಣ ಎಂದು ಅಧಿಕಾರಿಗಳು ಟ್ವೀಟ್ ಮಾಡಿ, ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!