Monday, August 15, 2022

Latest Posts

ಅಫಘಾನಿಸ್ತಾನದಲ್ಲಿರುವ ಭಾರತೀಯರ ಬಗ್ಗೆ ಮಾತನಾಡಿದ ಸೋನು ಸೂದ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕಷ್ಟ ಎಂದರೆ ಸಹಾಯಕ್ಕೆ ಓಡಿ ಬರುವ ಬಾಲಿವುಡ್ ನಟ ಸೋನು ಸೂದ್ ಇದೀಗ ಮೊದಲ ಬಾರಿಗೆ ಅಫ್ಘಾನಿಸ್ತಾನದ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ.
ಅಫ್ಘಾನ್‌ನಲ್ಲಿ ಭಾರತೀಯರಿದ್ದಾರೆ. ಅವರಿಗೆ ಹಿಂದೆಂದಿಗಿಂತಲೂ ಹೆಚ್ಚು ಬೆಂಬಲ ನೀಡಬೇಕಿದೆ ಎಂದಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಇರುವ ಎಲ್ಲ ಭಾರತೀಯರಿಗೆ ನಮ್ಮ ಅವಶ್ಯಕತೆ ಇದೆ. ಅಲ್ಲಿಂದ ಬರುವ ಕುಟುಂಬಗಳಿಗೆ ಉದ್ಯೋಗ ನೀಡಬೇಕು. ಅವರ ಕಾಲ ಮೇಲೆ ಅವರು ಮತ್ತೆ ನಿಲ್ಲುವಂತೆ ಮಾಡಬೇಕು. ಹೊಸ ಜೀವನ ಕಟ್ಟಿಕೊಡಲು ಸಹಾಯ ಮಾಡಬೇಕು ಎಂದಿದ್ದಾರೆ.
ಸೋನು ಸೂದ್ ಅವರ ಮಾತಿಗೆ ಅಭಿಮಾನಿಗಳು ರಿಯಲ್ ಹೀರೋ ಮಾತಿನಲ್ಲಿ ಸತ್ಯ ಇದೆ. ನಾವೆಲ್ಲರೂ ಅವರಿಗೆ ಸಹಾಯ ಮಾಡಬೇಕು ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss