ಶೀಘ್ರದಲ್ಲೇ 150 ಕೋಟಿ ಟ್ವಿಟ್ಟರ್‌ ಅಕೌಂಟ್‌ ಆಗುತ್ತೆ ಡಿಲೀಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಶೀಘ್ರದಲ್ಲೇ ಟ್ವಿಟ್ಟರ್‌ 150 ಕೋಟಿ (1.5 ಬಿಲಿಯನ್‌) ಅಕೌಂಟ್‌ಗಳನ್ನು ಡಿಲೀಟ್‌ ಮಾಡಲಾಗುವುದು ಎಂದು ಸಿಇಒ ಎಲೋನ್‌ ಮಸ್ಕ್‌ ಹೇಳಿದ್ದಾರೆ.
ಟ್ಟಿಟ್ಟರ್‌ನಲ್ಲಿ ಖಾತೆ ತೆರೆದ ಮೇಲೆ ಯಾವುದೇ ಟ್ವೀಟ್‌ ಮಾಡದ ಹಾಗೂ ಲಾಗಿನ್‌ ಆಗದೇ ಇರುವ ಅಕೌಂಟ್‌ಗಳನ್ನು ಡಿಲೀಟ್‌ ಮಾಡಲಾಗುವುದು ಸ್ಪಷ್ಟಪಡಿಸಿದ್ದಾರೆ.
ನಿಮ್ಮ ನಿಜವಾದ ಖಾತೆಯ ಸ್ಥಿತಿಯನ್ನು ತೋರಿಸುವ ಸಾಫ್ಟ್‌ವೇರ್ ಅಪ್‌ಡೇಟ್‌ಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿದೆ. ಒಂದು ವೇಳೆ ನಿಮ್ಮ ಅಕೌಂಟ್‌ ನಿಷೇಧಕ್ಕೊಳಗಾದರೆ, ಏಕೆ ಮತ್ತು ಹೇಗೆ ಎಂಬುದನ್ನು ತಿಳಿಯಲು ಮೇಲ್ಮನವಿ ಸಲ್ಲಿಸಬೇಕು ಎಂದು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!