Wednesday, August 10, 2022

Latest Posts

ಪೀರಿಯಡ್ಸ್ ಡೇಟ್ ಹತ್ರ ಬರ್ತಿದ್ದ ಹಾಗೇ ಬಾಯಲ್ಲಿ ಹುಣ್ಣಾಗುತ್ತಾ? ಹಾಗಿದ್ರೆ ಈ ಮನೆಮದ್ದು ಟ್ರೈ ಮಾಡಿ…

ಪೀರಿಯಡ್ಸ್ ಡೇಟ್ ಹತ್ರ ಬರ್ತಿದ್ದ ಹಾಗ  ದೇಹ ಉಷ್ಣತೆ ಹೆಚ್ಚಾಗುತ್ತದೆ. ಆಗ ಬಾಯಲ್ಲಿ ಹುಣ್ಣುಗಳಾಗುತ್ತವೆ. ಬಾಯಲ್ಲಿ ಹುಣ್ಣಾದರೆ ಊಟ, ತಿಂಡಿ ಮಾಡುವುದಕ್ಕೂ ಕಷ್ಟವಾಗುತ್ತದೆ. ಖಾರದ ಆಹಾರವಂತೂ ಬಾಯಿಗೆ ತಾಗಿಸುವುದಕ್ಕೂ ಆಗುವುದಿಲ್ಲ. ಕೆಲವೊಬ್ಬರಿಗೆ ಇದು ಕಾಮನ್ ಕಾಯಿಲೆಯಂತೆ ಅನ್ನಿಸಬಹುದು. ಆದರೆ ಇದೆ ಮುಂದೆ ದೊಡ್ಡ ಸಮಸ್ಯೆಯಾಗುತ್ತದೆ. ಪೀರಿಯಡ್ಸ್ ಸಮಯದಲ್ಲಾಗುವ ಬಾಯಿ ಹುಣ್ಣು ಸಮಸ್ಯೆಗೆ ಈ ಮನೆ ಮದ್ದು ಟ್ರೈ ಮಾಡಿ.

ಬಸಳೆ ಸೊಪ್ಪು:
ಬಸಳೆ ಸೊಪ್ಪಿನಲ್ಲಿ ಇರುವ ಲೋಳೆ ಅಂಶ ಬಾಯಿ ಹುಣ್ಣನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ಬಾಯಿಯಲ್ಲಿ ಹುಣ್ಣಾದಾಗ ಇದನ್ನು ಚೆನ್ನಾಗಿ ಜಗಿದು ನುಂಗಬೇಕು.

ತೆಂಗಿನ ಮಿಳ್ಳೆ:
ಚಿಕ್ಕ ತೆಂಗಿನ ಕಾಯಿಯನ್ನು ಲಿಂಬು ರಸದಲ್ಲಿ ತೇಯ್ದು ತಿನ್ನುವುದರಿಂದ ಬಾಯಿಯಲ್ಲಿ ಆಗಿರುವಂತಹ ಹುಣ್ಣುಗಳು ಕಡಿಮೆ ಆಗುತ್ತದೆ.

ಜೇನು ತುಪ್ಪ:
ಬಾಯಿಯಲ್ಲಿ ಎಲ್ಲಿ ಹುಣ್ಣಾಗಿದೆಯೋ ಆ ಜಾಗಕ್ಕೆ ಈ ಜೇನುತುಪ್ಪವನ್ನು ಹಚ್ಚುವುದನ್ನು ರೂಢಿ ಮಾಡಿಕೊಳ್ಳಿ. ಜೇನು ತುಪ್ಪಕ್ಕೆ ಗಾಯಗಳನ್ನು ಗುಣಪಡಿಸುವ ಶಕ್ತಿ ಇದೆ.

ಅಡಿಗೆ ಸೋಡಾ:
ಅಡಿಗೆ ಸೋಡಾಕ್ಕೆ ಸ್ವಲ್ಪ ನೀರನ್ನು ಸೇರಿಸಿಕೊಂಡು ಅದನ್ನು ಬಾಯಿ ಹುಣ್ಣಾದ ಜಾಗಕ್ಕೆ ಹಚ್ಚಿ. ಹೀಗೆ ದಿನಕ್ಕೆ ಮೂರು ಹೊತ್ತು ಮಾಡಿ. ಇದನ್ನು ಮಾಡಿಕೊಂಡು 5 ನಿಮಿಷ ಮಾತ್ರ ಬಾಯಲ್ಲಿ ಇಟ್ಟುಕೊಳ್ಳಬೇಕು. ಬೇಗ ಬಾಯಿ ಹುಣ್ಣು ಕಡಿಮೆ ಆಗುತ್ತದೆ.

ದಾಸವಾಳ ಸೊಪ್ಪು:
ದಾಸವಾಳದ ಸೊಪ್ಪನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಆದನ್ನು ನೀರಿಗೆ ಹಾಕಿ 3 ತಾಸು ಬಿಡಿ. ಅದು ದಪ್ಪಗಾಗುತ್ತದೆ. ಅದನ್ನು ಬಾಯಿಗೆ ಹಾಕಿಕೊಂಡು ಮುಕ್ಕಳಿಸಿ. ಹೀಗೆ ಮಾಡಿದರೆ ಬಾಯಿ ಹುಣ್ಣು ಹೋಗುತ್ತದೆ.

ನೀರು ಮತ್ತು ಉಪ್ಪು:
ಉಗುರು ಬೆಚ್ಚಗಿನ ನೀರಿಗೆ ಉಪ್ಪನ್ನು ಸೇರಿಸಿಕೊಂಡು ಅದರಿಂದ ಆಗಾಗ ಬಾಯಿ ಮುಕ್ಕಳಿಸಿ. ಹೀಗೆ ಮಾಡಿದರೆ ಬಾಯಿಯಲ್ಲಿ ಇರುವ ಬ್ಯಾಕ್ಟೀರಿಯಾ ಹೋಗುತ್ತದೆ. ಬಾಯಿ ಹುಣ್ಣು ಕಡಿಮೆ ಆಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss