Sunday, August 14, 2022

Latest Posts

ತೆರೆ ಮೇಲೆ ಬರಲಿದೆ ಸೌರವ್​ ಗಂಗೂಲಿ ಬಯೋಪಿಕ್: ದಾದಾ ಪಾತ್ರಕ್ಕೆ ಬಣ್ಣಹಚ್ಚುವವರು ಯಾರು?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ ಅವರ ಬಯೋಪಿಕ್ ಮಾಡಲು ಸಿದ್ಧತೆ ನಡೆಯುತ್ತಿದ್ದು, ಬಹಳ ದಿನಗಳಿಂದ ಈ ಬಗ್ಗೆ ಸುದ್ದಿ ಹರಿದಾಡುತ್ತಿತ್ತು. ಆದೀಗ ಅಧಿಕೃತ ಮಾಹಿತಿ ಹೊರಬಂದಿದ್ದು, ಸ್ವತಃ ಸೌರವ್​ ಗಂಗೂಲಿ ಅವರೇ ತಮ್ಮ ಬಯೋಪಿಕ್​ಗೆ ಅನುಮತಿ ನೀಡಿರುವುದನ್ನು ಖಚಿತಪಡಿಸಿದ್ದಾರೆ.
ನನ್ನ ಬಯೋಪಿಕ್​ ಮಾಡಲು ನಾನು ಅನುಮತಿ ನೀಡಿದ್ದೇನೆ. ಈ ಸಿನಿಮಾ ಹಿಂದಿಯಲ್ಲಿ ಮೂಡಿಬರಲಿದೆ. ನಿರ್ದೇಶಕರು ಯಾರು ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಎಲ್ಲವೂ ಅಂತಿಮವಾಗಲು ಇನ್ನೂ ಕೆಲವು ದಿನಗಳ ಸಮಯ ಬೇಕಾಗಲಿದೆ’ ಎಂದು ಗಂಗೂಲಿ ಹೇಳಿದ್ದಾರೆ. ಈ ಬಯೋಪಿಕ್​ನಲ್ಲಿ ಗಂಗೂಲಿ ಅವರ ಆರಂಭದ ಜೀವನದಿಂದ ಹಿಡಿದು ಅವರು ಬಿಸಿಸಿಐ ಅಧ್ಯಕ್ಷರಾಗುವವರೆಗಿನ ಅನೇಕ ವಿವರಗಳು ಇರಲಿವೆ.
ಮೂಲಗಳ ಪ್ರಕಾರ ದೊಡ್ಡ ಪ್ರೊಡಕ್ಷನ್​ ಕಂಪನಿಯೊಂದು ಸೌರವ್​ ಗಂಗೂಲಿಯವರ ಬಯೋಪಿಕ್​ ಮಾಡಲು ಮುಂದೆ ಬಂದಿದ್ದು, 200ರಿಂದ 250 ಕೋಟಿ ರೂ. ಬಜೆಟ್​ನಲ್ಲಿ ಈ ಚಿತ್ರ ಮೂಡಿಬರಲಿದೆ. ಸ್ಕ್ರಿಪ್ಟ್​ ಕೆಲಸಗಳು ಜಾರಿಯಲ್ಲಿದ್ದು, ಗಂಗೂಲಿ ಜೊತೆ ಅನೇಕ ಮೀಟಿಂಗ್​ಗಳು ನಡೆದಿವೆ.
 ಗಂಗೂಲಿ ಪಾತ್ರದಲ್ಲಿ ನಟಿಸುವ ಕಲಾವಿದರ ಯಾರು?
ಸದ್ಯಕ್ಕೆ ಹಾಟ್​ ಟಾಪಿಕ್ ಗಂಗೂಲಿ ಪಾತ್ರದಲ್ಲಿ ನಟಿಸುವ ಕಲಾವಿದರ ಯಾರು? , ತಮ್ಮ ಪಾತ್ರದಲ್ಲಿ ಬಾಲಿವುಡ್​ ನಟ ರಣಬೀರ್​ ಕಪೂರ್​ ಅವರು ನಟಿಸಿದರೆ ಸೂಕ್ತ ಎಂದು ಸ್ವತಃ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಇಬ್ಬರು ನಟರ ಹೆಸರುಗಳು ಹರಿದಾಡುತ್ತಿವೆ. ಅಂತಿಮವಾಗಿ ಯಾರು ಆಯ್ಕೆ ಆಗುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.
ಈ ಹಿಂದೆ ಎಂಎಸ್​ ಧೋನಿ ಜೀವನಾಧಾರಿತ ‘ಎಂಎಸ್​ ಧೋನಿ: ದಿ ಅನ್​ಟೋಲ್ಡ್​ ಸ್ಟೋರಿ’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಮೊಹಮ್ಮದ್​ ಅಜರುದ್ದೀನ್ ಜೀವನಾಧಾರಿತ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಗಳಿಸಿರಲಿಲ್ಲ. ಸಚಿನ್​ ಜೀವನದ ಕುರಿತು ‘ಸಚಿನ್​: ಎ ಬಿಲಿಯನ್​ ಡ್ರೀಮ್ಸ್​’ ಡಾಕ್ಯುಡ್ರಾಮಾ ಮೂಡಿಬಂದಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss