ಲಂಡನ್‌ ಬೀದಿಯಲ್ಲಿ ದಾದಾ ಮಸ್ತ್‌ ಮಸ್ತ್ ಸ್ಟೆಪ್ಸ್:‌ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟೀಂ ಇಂಡಿಯಾವನ್ನು ಕ್ರಿಕೆಟ್ ಜಗತ್ತಿನಲ್ಲಿ ಅಗ್ರಸ್ಥಾನಕ್ಕೆ ತಂದವರಲ್ಲಿ ಸೌರವ್‌ ಗಂಗೂಲಿ ಕೂಡ ಒಬ್ಬರು. ಅವರ ನಾಯಕತ್ವದಲ್ಲಿ ಭಾರತವು 2001-2002 ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಜಯದ ನಗೆ ಬೀರಿತ್ತು. ಅಂದಿಗೂ ಇಂದಿಗೂ ಟೀಂ ಇಂಡಿಯಾದ ಶ್ರೇಷ್ಠ ನಾಯಕರಾಗಿರುವ ಗಂಗೂಲಿ ಅವರ ಹೆಸರು ಕ್ರಿಕೆಟ್ ಅಭಿಮಾನಿಗಳ ಬಾಯಲ್ಲಿ ಕೇಳುತ್ತಲೇ ಇರುತ್ತೇವೆ. ಪ್ರಸ್ತುತ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷರಾಗಿರುವ ಗಂಗೂಲಿ ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೌರವ್ ಗಂಗೂಲಿ ಶುಕ್ರವಾರ ತಮ್ಮ 50 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಲಂಡನ್‌ನ ಬೀದಿಗಳಲ್ಲಿ, ಪತ್ನಿ ಡೊನ್ನಾ, ಮಗಳು ಸನಾ ಮತ್ತು ಅವರ ಸ್ನೇಹಿತರೊಂದಿಗೆ ಸೇರಿ ಗಂಗೂಲಿ ಹೆಜ್ಜೆ ಹಾಕಿದ್ದಾರೆ. ಗಂಗೂಲಿ ತನ್ನ ಮಗಳ ಕೈ ಹಿಡಿದು ಹೆಜ್ಜೆ ಹಾಕುತ್ತಿರುವುದು ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ತಮ್ಮ ಕುಟುಂಬ ಹೀಗೆ ಖುಷಿಯಾಗಿರಲೆಂದು ಅಭಿಮಾನಿಗಳು ಹರಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!