ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರಿಗೆ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ದೇಶದಲ್ಲಿ ಗಲಭೆ ಭುಗಿಲೆದಿದ್ದು, ಹಿಂಸಾಚಾರಕ್ಕೆ 72 ಮಂದಿ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ಜೋಹಾನ್ಸ್ಬರ್ಗ್ ಹೊರವಲಯದ ಸೊವೆಟೊದಲ್ಲಿ ಸೇರಿದಂತೆ ಹಲವು ಭಾಗಗಳಲ್ಲಿ ಗಲಭೆಕೋರರು ಹಿಂಸಾಚಾರ ನಡೆಸುತ್ತಿದ್ದು, ಈವರೆಗೂ 1,234 ಮಂದಿಯನ್ನು ಬಂಧಿಸಲಾಗಿದೆ.
ಗೌಟೆಂಗ್ ನಲ್ಲಿ 45 ಮಂದಿ, ಕ್ವಾಜುಲು-ನಾಟಾಲ್ ನಲ್ಲಿ 27 ಮಂದಿ ಸೇರಿದಂತೆ ಒಟ್ಟು 72 ಜನ ಮೃತಪಟ್ಟಿದ್ದಾರೆ. ಭ್ರಷ್ಟಾಚಾರ ಆರೋಪದ ಅಡಿಯಲ್ಲಿ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರಿಗೆ 15 ತಿಂಗಳ ಜೈಲು ವಾಸ ನೀಡಲಾಗುದೆ. ಈ ತೀರ್ಪಿನ ಬಳಿಕ ದೇಶದಲ್ಲಿ ಗಲಭೆ ಹಾಗೂ ಲೂಟಿ ನಡೆಯುತ್ತಿದ್ದು, ಪರಿಸ್ಥಿತಿ ನಿಯಂತ್ರಿಸಲು ಅಧ್ಯಕ್ಷ ಸಿರಿಲ್ ರಾಮಫೊಸಾ ಅವರು ಭದ್ರತಾ ಪಡೆಗಳನ್ನು ನಿಯೋಜಿಸಿದ್ದಾರೆ.