Thursday, August 18, 2022

Latest Posts

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ, ಟಿ-20 ಪಂದ್ಯ: ಟೀಂ ಇಂಡಿಯಾ ಮಹಿಳಾ ಟೀಮ್ ಪ್ರಕಟ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದಕ್ಷಿಣ ಆಫ್ರಿಕಾ ವಿರುದ್ಧ ಮಾರ್ಚ್​ 7ರಿಂದ ಆರಂಭಗೊಳ್ಳಲಿರುವ ಮಹಿಳಾ ಕ್ರಿಕೆಟ್ ಸರಣಿಗೆ ಆಲ್ ಇಂಡಿಯಾ ಮಹಿಳಾ ಆಯ್ಕೆ ಸಮಿತಿ ಟೀಂ ಇಂಡಿಯಾ ಪ್ರಕಟಿಸಿದ್ದು, ಏಕದಿನ ಸರಣಿಯಲ್ಲಿ ಮಿಥಾಲಿ ರಾಜ್​ ಹಾಗೂ ಟಿ-20 ತಂಡವನ್ನ ಹರ್ಮನ್​ಪ್ರೀತ್​ ಕೌರ್ ಮುನ್ನಡೆಸಲಿದ್ದಾರೆ.
ಐದು ಏಕದಿನ ಪಂದ್ಯಗಳ ಸರಣಿ ಮಾರ್ಚ್​ 7ರಿಂದ ಸರಣಿ ಆರಂಭಗೊಳ್ಳಲಿದ್ದು, ಟಿ-20 ಸರಣಿ ಮಾರ್ಚ್​ 20ರಿಂದ ಆರಂಭವಾಗಲಿದೆ.
ಸಿ ಪ್ರತ್ಯುಷಾ, ಯಸ್ತಿಕಾ ಭಾಟಿಯಾ, ಆಯುಶಿ ಸೋನಿ, ಶ್ವೇತಾ ವರ್ಮಾ, ಮೋನಿಕಾ ಪಟೇಲ್​ ಮತ್ತು ಸಿಮ್ರಾನ್​ ದಿಲ್ ಬಹದ್ದೂರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಟೀಂ ಏಕ್ತಾ ಬಿಶ್ತ್​, ಅನುಜಾ ಪಾಟೀಲ್​, ವೇದಕೃಷ್ಣಮೂರ್ತಿ, ತಾನಿಯಾ ಭಾಟಿಯಾ ಮತ್ತು ಶಿಖಾ ಪಾಂಡೆ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ವಂಚಿತರಾಗಿದ್ದಾರೆ.

ಏಕದಿನ ಮಹಿಳಾ ಟೀಮ್: ಮಿಥಾಲಿ ರಾಜ್​(ಕ್ಯಾಪ್ಟನ್​), ಸ್ಮೃತಿ ಮಂದಾನಾ, ರೋಡ್ರಿಗೆಸ್​, ಪುನಂ ರಾವತ್​, ಪ್ರಿಯಾ ಪೂನಿಯಾ, ಯಸ್ತಿಕ್ ಭಾಟಿಯಾ, ಹರ್ಮನ್​ಪ್ರೀತ್ ಕೌರ್​(ಉ.ನಾಯಕಿ),ಡಿ. ಹೇಮಲತಾ, ದೀಪ್ತಿ ಶರ್ಮಾ, ಸುಷ್ಮಾ ವರ್ಮಾ(ವಿ.ಕೀ), ಸ್ವೇತಾ ವರ್ಮಾ(ವಿ.ಕೀ), ರಾಧಾ ಯಾದವ್​, ರಾಜೇಶ್ವರಿ ಗಾಯ್ಕವಾಡ್, ಜೂಲನ್ ಗೋಸ್ವಾಮಿ, ಮಾನ್ಸಿ ಜೋಶಿ, ಪೂನಂ ಯಾದವ್​, ಪ್ರತ್ಯೂಸ್​ ಹಾಗೂ ಮೋನಿಕಾ ಪಟೇಲ್​

ಟಿ 20 ಮಹಿಳಾ ಟೀಮ್ : ಹರ್ಮನ್​ಪ್ರೀತ್ ಕೌರ್​(ಕ್ಯಾಪ್ಟನ್), ಸ್ಮೃತಿ ಮಂದಾನಾ(ಉ.ನಾಯಕಿ),ಶಫಾಲಿ ವರ್ಮಾ, ರೋಡ್ರಿಗೆಸ್​, ದೀಪ್ತಿ ಶರ್ಮಾ,ರಿಚಾ ಗೋಸ್​, ಹರ್ಲಿನ್​ ಡಿಯೋಲ್, ಸುಷ್ಮಾ ವರ್ಮಾ(ವಿ.ಕೀ), ನುಜಾತ್ ಪ್ರವೀಣ್​(ವಿ.ಕೀ), ಆಯೋಸಿ ಸೂನಿ, ಅರುಂಧತಿ ರೆಡ್ಡಿ, ರಾಧಾ ಯಾದವ್​, ರಾಜೇಶ್ವರಿ ಗಾಯ್ಕವಾಡ್​, ಪೂನಂ ಯಾದವ್​, ಮಾನ್ಸಿ ಜೋಶಿ, ಮೋನಿಕಾ ಪಟೇಲ್​,ಪ್ರತ್ಯೂಸ್​ ಹಾಗೂ ಸಿಮ್ರಾನ್​ ದಿಲ್ ಬಹದ್ದೂರ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!