Tuesday, August 16, 2022

Latest Posts

ಗಣಿನಾಡು ಜಿಲ್ಲೆಗೆ ಕಾಲಿಟ್ಟ ಸೌತ್ ಆಫ್ರಿಕನ್ ವೈರಸ್: ಬೆಚ್ಚಿ ಬಿದ್ದ ಜನತೆ

ಹೊಸದಿಗಂತ ವರದಿ, ಬಳ್ಳಾರಿ:

ಸೌತ್ ಆಫ್ರಿಕಾ ವೈರಸ್ ವ್ಯಕ್ತಿಯೋಬ್ಬರಿಗೆ ಇರುವುದು ದೃಢಪಟ್ಟಿದ್ದು, ಒಂದು ವರ್ಷಗಳ ಕಾಲ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ ಹೊರ ಬಂದಿದ್ದ ಜಿಲ್ಲೆಯ ಜನತೆ ಮತ್ತೆ ಸಂಕಷ್ಟ ಎದುರಿಸುವಂತಾಗಿದೆ.
ದುಬೈನಿಂದ ಕಳೆದ ವಾರ ಜಿಲ್ಲೆಗೆ ಆಗಮಿಸಿದ ಇಬ್ಬರ ಪೈಕಿ ಒಬ್ಬರಿಗೆ ಸೊಂಕಿನ ಲಕ್ಷಣಗಳು ಕಂಡು ಬಂದಿದ್ದವು. ತಪಾಸಣೆಗೆ ಒಳಪಡಿಸಿದಾಗ ಸೊಂಕು ಇದು ಇರುವುದು ದೃಢಪಟ್ಟಿದೆ. ವಿಮಾನ ನಿಲ್ದಾಣದಲ್ಲಿ ತಪಾಸಣೆ ಒಳಪಡಿಸಿದಾಗ ಇಬ್ಬರಿಗೂ ಸೊಂಕು ಪತ್ತೆಯಾಗಿರಲಿಲ್ಲ, ಇಲ್ಲಿಗೆ ಆಗಮಿಸಿದಾಗ ಒಬ್ಬರಿಗೆ ಲಕ್ಷಣಗಳು ಕಂಡು ಬಂದ ಹಿನ್ನೆಲೆ ತಪಾಸಣೆ ವೇಳೆ ಸೊಂಕು ಇರುವುದು ದೃಢಪಟ್ಟಿದೆ.
ದುಬೈ ನಿಂದ ಬಂದಿದ್ದರಿಂದ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಸೊಂಕು ಯಾವ ವಿಧ(ವೇರಿಯಂಟ್) ಎಂದು ಖಚಿತ ಪಡಿಸಿಕೊಳ್ಳಲು ಲ್ಯಾಬ್ ಕಳುಹಿಸಲಾಗಿತ್ತು. ಇಂದು ವರದಿ ಬಂದಿದ್ದು, ಸೌತ್ ಆಫ್ರಿಕನ್ ವೇರಿಯಂಟ್ ಎಂಬುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಪಾಟೆ ಅವರು ತಿಳಿಸಿದ್ದಾರೆ. ಈ ವ್ಯಕ್ತಿಯನ್ನು ಕೂಡಲೇ ಹೋಂ ಕ್ವಾರಂಟೈನ್ ಮಾಡಿ, ಚಿಕಿತ್ಸೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹೊಸಪೇಟೆಯಲ್ಲಿ‌ ಹೊಟೇಲ್ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.
ಹೊಸಪೇಟೆಯ ಹೊಟೇಲ್ ​ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.
ಈ ಹಿಂದೆ ರೈಲ್ವೆ ಇಲಾಖೆಯ 29 ಲೋಕೊ ಪೈಲಟ್​ಗಳಲ್ಲಿ ಕೊರೋನಾ ಸೋಂಕು ಕಂಡು ಬಂದಿತ್ತು. ಈ ವೇಳೆ ರೈಲ್ವೆ ಇಲಾಖೆ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕಿತರನ್ನು ಸುಲಭವಾಗಿ ಪತ್ತೆ ಹಚ್ಚಿ ಕ್ವಾರಂಟೈನ್​ ಮಾಡಲಾಗಿತ್ತು. ಆದರೆ, ಇದೀಗ ಹೊಟೇಲ್ ​ಗೆ ಬಂದು ಹೋದ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚುವುದು ಕಷ್ಟ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಬ್ಬರು ಸೋಂಕಿತರಲ್ಲಿ ಒಬ್ಬರು ಎಂಜೆ ನಗರದವರು ಎಂಬುದು ದೃಢಪಟ್ಟಿದೆ. ಹೊಸಪೇಟೆಯಲ್ಲಿ ಸದ್ಯ 38 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss