ಮತ್ತೆ ಶೂಟಿಂಗ್ ನತ್ತ ಮುಖಮಾಡಿದ ಸೌತ್ ಬ್ಯೂಟಿ ಸಮಂತಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮೈಯೋಸಿಟಿಸ್ ಕಾಯಿಲೆಗೆ ಚಿಕಿತ್ಸೆ ಪಡೆದ ಬಳಿಕ ಸೌತ್ ಬ್ಯೂಟಿ ಸಮಂತಾ (Samantha) ಮತ್ತೆ ತಮ್ಮ ಮುಂಬರುವ ಚಿತ್ರ ‘ಸಿಟಾಡೆಲ್’ ಇಂಡಿಯಾದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ.

ರಾಜ್ ಮತ್ತು ಡಿಕೆ ನಿರ್ದೇಶನದ ಚಿತ್ರದ ಹೊಸ ಶೆಡ್ಯೂಲ್‌ನಲ್ಲಿ ವರುಣ್ ಧವನ್ ಜತೆ ಸಮಂತಾ ಕಾಣಿಸಿಕೊಂಡಿದ್ದಾರೆ.

ʻಸಿಟಾಡೆಲ್’ ಅಮೆರಿಕಾದ ಸೀರಿಸ್ ಆಗಿದ್ದು, ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ಕಾಣಿಸಿಕೊಂಡಿದ್ದರು. ಅದೇ ಸರಣಿಯ ಹಿಂದಿ ವರ್ಷನ್‌ನಲ್ಲಿ ಸಮಂತಾ ಮತ್ತು ವರುಣ್ ಧವನ್ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯ ಚೇತರಿಸಿಕೊಂಡಿರುವ ಸಮಂತಾ ಮತ್ತೆ ಆಕ್ಟೀವ್ ಆಗಿದ್ದಾರೆ. ಆಗಾಗಲೇ ಶೂಟಿಂಗ್‌ಗಾಗಿ ಸಮಂತಾ ಮುಂಬೈಗೆ ಬೀಡು ಬಿಟ್ಟಿದ್ದಾರೆ. 2 ವಾರಗಳ ಕಾಲ ಮುಂಬೈನಲ್ಲಿ ಶೂಟಿಂಗ್ ನಡೆಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!