ಭಾರತ ದಕ್ಷಿಣ ಆಫ್ರಿಕಾ ಎರಡನೇ ಏಕದಿನ ಪಂದ್ಯದ ಟಿಕೆಟ್​​ ಬುಕ್ಕಿಂಗ್​ ಆರಂಭ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯ ಅಕ್ಟೋಬರ್ 9ರಂದು ಜಾರ್ಖಂಡ್​ನ ರಾಜಧಾನಿ ರಾಂಚಿಯ ಜೆಎಸ್​​ಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕಾಗಿ ಗುರುವಾರದಿಂದಲೇ ಟಿಕೆಟ್ ಮಾರಾಟ ಆರಂಭವಾಗಿದ್ದು, ಈ ಬಾರಿಯ ಅತಿ ಕಡಿಮೆ ದರದ ಟಿಕೆಟ್ 1,100 ರೂಪಾಯಿದಾದರೇ, ದುಬಾರಿ ಟಿಕೆಟ್ ಹತ್ತು ಸಾವಿರ ರೂಪಾಯಿಗಳಾಗಿವೆ. ಟಿಕೆಟ್​ ದರವನ್ನು ರಾಜ್ಯ ಕ್ರಿಕೆಟ್​​ ಮಂಡಳಿ ನಿಗದಿ ಪಡಿಸಿದೆ.

ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಈ ಕ್ರೀಡಾಂಗಣದಲ್ಲಿ ಒಂದೇ ಒಂದು ಪಂದ್ಯವು ನಡೆದಿರಲಿಲ್ಲ ಇದೀಗ ಹಲವು ದಿನಗಳ ನಂತರ ಈ ಮೈದಾನದಲ್ಲಿ ಕ್ರಿಕೆಟ್​​ ಪಂದ್ಯ ನಡೆಯುತ್ತಿದ್ದು, ಕ್ರಿಕೆಟ್​​ ಅಭಿಮಾನಿಗಳು ಟಿಕೆಟ್​​ ಖರೀದಿಸಲು ಆರಂಭಿಸಿದ್ದಾರೆ. ಆಧಾರ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಪಂದ್ಯದ ಟಿಕೆಟ್‌ಗಳನ್ನು ನೀಡಲಾಗುತ್ತದೆ. ಇನ್ನು ವ್ಯಕ್ತಿಗೆ ಮೂರು ಟಿಕೆಟ್​ಗಳು ಮಾತ್ರ ನಿಗದಿ ಪಡಿಸಲಾಗಿದ್ದು, ಆನ್​ಲೈನ್​ ಮೂಲಕವು ಟಿಕೆಟ್​​ ಖರೀದಿಸಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!